IDFC ಬ್ಯಾಂಕ್ ಸ್ಕಾಲರ್ ಶಿಪ್; ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ವಿದ್ಯಾರ್ಥಿವೇತನ
Photo Credit : IDFC First Bank
ಪೂರ್ಣಾವಧಿಯ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಕೋರ್ಸ್ (ಎಂಬಿಎ)ನ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯ ನೀಡಲಾಗುತ್ತಿದೆ.
ಉನ್ನತ ಶಿಕ್ಷಣ ಪಡೆಯುವ ಕನಸು ಹೊಂದಿದ್ದರೂ, ಆರ್ಥಿಕ ಅಡಚಣೆಯ ಕಾರಣದಿಂದ ತಮ್ಮ ಗುರಿ ತಲುಪಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘IDFC ಫಸ್ಟ್ ಬ್ಯಾಂಕ್’ ಸ್ಕಾಲರ್ ಶಿಪ್ ಕೊಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆಸರೆಯಾಗುವ ಉದ್ದೇಶದಿಂದ ಬ್ಯಾಂಕ್ ಈ ವಿದ್ಯಾರ್ಥಿವೇತನ ಜಾರಿಗೆ ತಂದಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
IDFC First Bank MBA Scholarship 2026-28 ಎಂದು ಕರೆಯಲಾಗುವ ಕಾರ್ಯಕ್ರಮದಲ್ಲಿ ಎರಡು ವರ್ಷಗಳ ಪೂರ್ಣಾವಧಿಯ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಕೋರ್ಸ್(MBA)ನ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯ ನೀಡಲಾಗುತ್ತಿದೆ.
ಹಣಕಾಸಿನ ತೊಂದರೆಯಲ್ಲಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಶಿಕ್ಷಣ ಪೂರೈಸಲು ಒಟ್ಟು 2 ಲಕ್ಷ ರೂ.ಗಳ ಆರ್ಥಿಕ ನೆರವು ಪಡೆಯಲಿದ್ದಾರೆ. ಎರಡು ವರ್ಷಗಳ ಕೋರ್ಸ್ ಅವಧಿಯಲ್ಲಿ ಪ್ರತಿ ವರ್ಷಕ್ಕೆ ತಲಾ 1 ಲಕ್ಷ ರೂ.ಗಳಂತೆ ಹಣವನ್ನು ಬ್ಯಾಂಕ್ ವಿತರಿಸಲಿದೆ.
*ಆಸಕ್ತ ಅಭ್ಯರ್ಥಿಗಳು ಮುಂದಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದು: https://www.buddy4study.com/page/idfc-first-bank-mba-scholarship
*ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2026 ಜುಲೈ 08
ಸ್ಕಾಲರ್ ಶಿಪ್ ಪಡೆಯಲು ಅರ್ಹತೆಗಳೇನು?
• ಭಾರತದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
• ವಿದ್ಯಾರ್ಥಿಗಳು 2 ವರ್ಷ ಪೂರ್ಣಾವಧಿಯ ಎಂಬಿಎ ಕಾರ್ಯಕ್ರಮದಡಿ ಮೊದಲ ವರ್ಷದಲ್ಲಿ (2026-28 ಬ್ಯಾಚ್) ವ್ಯಾಸಂಗ ಮಾಡುತ್ತಿರಬೇಕು.
• ಈ ಯೋಜನೆಗೆ ಒಳಪಡುವ ನಿಗದಿತ ಹಾಗೂ ಮಾನ್ಯತೆ ಪಡೆದ ಎಂಬಿಎ ಕಾಲೇಜುಗಳಲ್ಲಿ ಪ್ರವೇಶ ಪಡೆದಿರಬೇಕು.
• ಕುಟುಂಬದ ಒಟ್ಟು ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 6 ಲಕ್ಷ ರೂ.ಗಳಿಗಿಂತ ಕಡಿಮೆ ಅಥವಾ ಸಮನಾಗಿರಬೇಕು.
• ಅರ್ಜಿದಾರರ ಆಧಾರ್ ಕಾರ್ಡ್ಗೆ ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.
• ಕುಟುಂಬದಲ್ಲಿ ಆದಾಯ ಗಳಿಸುವ ಯಾವುದೇ ಸದಸ್ಯರು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಉದ್ಯೋಗಿಯಾಗಿರಬಾರದು.
ಅಗತ್ಯ ದಾಖಲೆಗಳು
• ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಕಾಲೇಜಿನ ಹೆಸರು, ಪ್ರವೇಶ ವರ್ಷ ಮತ್ತು ಬ್ಯಾಚ್ ವಿವರ)
• ಕಾಲೇಜಿನ ಶುಲ್ಕ ಪಾವತಿಸಿದ ರಶೀದಿಯ ಪ್ರತಿ
• ವಯಸ್ಸು ಅಥವಾ ನಿವಾಸದ ಪುರಾವೆಗಾಗಿ: ಜನನ ಪ್ರಮಾಣಪತ್ರ, 10ನೇ ತರಗತಿಯ ಅಂಕಪಟ್ಟಿ ಅಥವಾ ಪಾಸ್ಪೋರ್ಟ್
• ಆದಾಯದ ಪುರಾವೆ: ಕುಟುಂಬದ ದುಡಿಯುವ ಸದಸ್ಯರ ಆದಾಯ ಪ್ರಮಾಣಪತ್ರ ಅಥವಾ ಐಟಿಆರ್ 143(1) ದಾಖಲೆ.
• ಕುಟುಂಬದಲ್ಲಿ ದುಡಿಯುವ ಸದಸ್ಯರು ಇಲ್ಲದಿದ್ದರೆ, ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ‘ಆದಾಯವಿಲ್ಲ’ ಎಂಬ ಪ್ರಮಾಣಪತ್ರ
• ವಿಶೇಷಚೇತನ ಅಭ್ಯರ್ಥಿಯಾಗಿದ್ದರೆ ಪ್ರಮಾಣಪತ್ರ
• ಶೈಕ್ಷಣಿಕ ಸಾಲ ಪಡೆದಿದ್ದರೆ ಬ್ಯಾಂಕ್ನಿಂದ ಮಂಜೂರಾದ ಸಾಲದ ಪತ್ರ
• ಕುಟುಂಬದ ಏಕೈಕ ಆದಾಯಗಳಿಸುವ ಸದಸ್ಯರು ಸಾವನ್ನಪ್ಪಿದ್ದರೆ ಮರಣ ಪ್ರಮಾಣಪತ್ರ
• ಎಂಬಿಎ ವ್ಯಾಸಂಗಕ್ಕಾಗಿ ಬೇರೆ ಯಾವುದೇ ಸ್ಕಾಲರ್ಶಿಪ್ ಪಡೆದಿದ್ದರೆ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲಿಗೆ ಆನ್ಲೈನ್ ವಿದ್ಯಾರ್ಥಿವೇತನ ಪೋರ್ಟಲ್ ಆದ buddy4study ಅಧಿಕತ ವೆಬ್ ಸೈಟ್ ಭೇಟಿ ಕೊಡಿ.
• ಅಲ್ಲಿ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆ ಅಥವಾ ಜಿಮೇಲ್ ಖಾತೆಯ ಮೂಲಕ buddy4study ನಲ್ಲಿ ನೋಂದಣಿ ಮಾಡಿಕೊಳ್ಳಿ.
• ನೋಂದಣಿ ನಂತರ ನಿಮ್ಮ ಲಾಗಿನ್ ಐಡಿ ಬಳಸಿ ಆನ್ಲೈನ್ ಅರ್ಜಿ ನಮೂನೆ ಪುಟಕ್ಕೆ ಲಾಗಿನ ಆಗಿ.
• ನಿಮ್ಮನ್ನು IDFC First Bank MBA Scholarship 2026-28 ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಅರ್ಜಿ ಸಲ್ಲಿಸುವ ಬಟನ್ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಅರ್ಹತೆ ಪರಿಶೀಲಿಸಿದ ನಂತರ ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆದ ಮೊಬೈಲ್ ಸಂಖ್ಯೆ ದೃಢೀಕರಿಸಿ.
• ಆನ್ಲೈನ್ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅದರಲ್ಲಿ ಕೇಳಲಾದ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರ ಭರ್ತಿ ಮಾಡಿ.
• ಎಲ್ಲಾ ಅಗತ್ಯ ದಾಖಲೆ ಸ್ಕ್ಯಾನ್ ಮಾಡಿ ಸರಿಯಾದ ಅಳತೆಯಲ್ಲಿ ಅಪ್ಲೋಡ್ ಮಾಡಿ.
• ಅಂತಿಮವಾಗಿ ಒದಗಿಸಿದ ಮಾಹಿತಿ ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.