ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Photo Credit : ibpsreg.ibps.in
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ) 350 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ) ಸ್ಪೆಷಲಿಸ್ಟ್ ಆಫೀಸರ್ SO ಹುದ್ದೆಯ ನೇಮಕಾತಿಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 350 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಸಿಬಿಐ ನೇಮಕಾತಿಗೆ ಅರ್ಜಿ ಸಲ್ಲಿಕೆ 2026 ಜನವರಿ 20ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಫೆಬ್ರವರಿ 03ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 2026 ಜನವರಿ 1ರಂತೆ ಕನಿಷ್ಠ ವಯಸ್ಸು 22 ವರ್ಷಗಳು ಮತ್ತು ಗರಿಷ್ಠ ವಯಸ್ಸು 30-35 ವರ್ಷಗಳು (ಹುದ್ದೆವಾರು). ಸೆಂಟ್ರಲ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2026ಕ್ಕೆ ಸಂಬಂಧಿಸಿದ ಹೆಚ್ಚುವರಿ ವಿವರವನ್ನು ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಗಮನಿಸಬಹುದು:
https://ibpsreg.ibps.in/cbidec25/
ಪ್ರಮುಖ ದಿನಾಂಕಗಳು
* ಆನ್‌ಲೈನ್ ಅರ್ಜಿ ಆರಂಭ: 20 ಜನವರಿ 2026
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಫೆಬ್ರವರಿ 2026
* ಶುಲ್ಕ ಪಾವತಿಗೆ ಕೊನೆಯ ದಿನಾಂಕ: 03 ಫೆಬ್ರವರಿ 2026
* ಪರೀಕ್ಷೆ ದಿನಾಂಕ: 2026 ಫೆಬ್ರವರಿ- ಮಾರ್ಚ್ ನಡುವೆ
* ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು
* ಫಲಿತಾಂಶ ದಿನಾಂಕ: ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು.
* ವಿವರಗಳಿಗೆ ಅಭ್ಯರ್ಥಿಗಳು ಸಿಬಿಐ ಅಧಿಕೃತ ವೆಬ್‌ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.
ಅರ್ಜಿ ಶುಲ್ಕ
* ಜನರಲ್/ಒಬಿಸಿ/ಇಡಬ್ಲ್ಯುಎಸ್: 850 ರೂ.
* ಎಸ್‌ಸಿ/ಎಸ್‌ಟಿ/ ಪಿಡಬ್ಲ್ಯುಡಿ: 175 ರೂ.
* ಮಹಿಳೆಯರಿಗೆ: 175 ರೂ.
* ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
ವಯೋಮಿತಿ
ಕನಿಷ್ಢ ವರ್ಷ: 22 ವರ್ಷಗಳು
ಗರಿಷ್ಠ ವರ್ಷ: 30 ವರ್ಷಗಳು (ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್-1)
ಗರಿಷ್ಠ ವರ್ಷ: 25-25 ವರ್ಷಗಳು (ವಿದೇಶಿ ವಿನಿಮಯ ಅಧಿಕಾರಿ)
ಸೆಂಟ್ರಲ್ ಬ್ಯಾಂಕ್ ನೇಮಕಾತಿ ಹುದ್ದೆಗೆ ಅವರ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡುತ್ತದೆ.
ಒಟ್ಟು ಹುದ್ದೆಗಳು
350 ಹುದ್ದೆಗಳು
ಹುದ್ದೆಯ ಹೆಸರು ಒಟ್ಟು ಹುದ್ದೆಗಳು
ವಿದೇಶಿ ವಿನಿಮಯ ಅಧಿಕಾರಿ 50 ಹುದ್ದೆಗಳು
ಮಾರ್ಕೆಟಿಂಗ್ ಅಧಿಕಾರಿ 300 ಹುದ್ದೆಗಳು
ವರ್ಗವಾರು ನೇಮಕಾತಿ
ಹುದ್ದೆಯ ಹೆಸರು ಜನರಲ್| ಒಬಿಸಿ| ಇಡಬ್ಲ್ಯುಎಸ್| ಎಸ್‌ಸಿ| ಎಸ್‌ಟಿ
ವಿದೇಶಿ ವಿನಿಮಯ ಅಧಿಕಾರಿ 22| 13| 05| 07| 03
ಮಾರ್ಕೆಟಿಂಗ್ ಅಧಿಕಾರಿ 122| 81| 30| 45| 22
ಅರ್ಹತೆಗಳು
ವಿದೇಶಿ ವಿನಿಮಯ ಅಧಿಕಾರಿ:
ಅಭ್ಯರ್ಥಿಗಳು ಪದವಿ ಜೊತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ & ಫೈನಾನ್ಸ್‌ನಿಂದ ವಿದೇಶಿ ವಿನಿಮಯ ಕಾರ್ಯನಿರ್ವಹಣೆಗಳಲ್ಲಿ ಪ್ರಮಾಣಪತ್ರವನ್ನು ಹೊಂದಿರಬೇಕು. ಅವರಿಗೆ ಕನಿಷ್ಠ 5 ವರ್ಷ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಇರಬೇಕು.
ಮಾರ್ಕೆಟಿಂಗ್ ಅಧಿಕಾರಿ
ಅಭ್ಯರ್ಥಿಗಳು ಪದವಿ ಜೊತೆಗೆ MBA / PGDM / PGDBM / PGPM ಅರ್ಹತೆಯನ್ನು ಹೊಂದಿರಬೇಕು. ಅವರು ಕನಿಷ್ಠ 02 ವರ್ಷಗಳ ಸಂಬಂಧಿತ ಕೆಲಸದ ಅನುಭವ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ
* ಲಿಖಿತ ಪರೀಕ್ಷೆ
* ಸಂದರ್ಶನ
* ದಾಖಲೆ ಪರಿಶೀಲನೆ