×
Ad

ಮೈಸೂರು: ಆರೋಗ್ಯ ಕ್ಷೇತ್ರದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

Update: 2026-01-22 18:33 IST

ಸಾಂದರ್ಭಿಕ ಚಿತ್ರ | Photo Credit : freepik

ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಸೂಚನೆಯಲ್ಲಿ ಹೇಳಿದೆ. ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ವೃತ್ತಿಜೀವನ ಹುಡುಕುತ್ತಿರುವವರಿಗೆ ಉತ್ತಮ ಅವಕಾಶವಾಗಿದೆ. ಆಸಕ್ತಿ ಅಭ್ಯರ್ಥಿಗಳು ಜನವರಿ 27ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ ಹೀಗಿದೆ

ಅರಿವಳಿಕೆ ತಜ್ಞರು 2, ಪ್ರಸೂತಿ ಮತ್ತುಸ್ತ್ರೀರೋಗ ತಜ್ಞರು 1, ಮಕ್ಕಳ ತಜ್ಞರು 2, ಒ.ಟಿ. ಟೆಕ್ನಿಷಿಯನ್ 1, ತಾಲೂಕು ಆಶಾ ಮೆಂಟರ್ 1, ಪ್ರಯೋಗಶಾಲಾ ತಂತ್ರಜ್ಞರು 2, ಶೂಶ್ರೂಷಕ ಅಧಿಕಾರಿಗಳು 16, ದಂತ ಶಸ್ತ್ರಚಿಕಿತ್ಸಕರು 6, ಫಿಜಿಷಿಯನ್ 1, ವೈದ್ಯಾಧಿಕಾರಿಗಳು 2, ಆಪ್ತ ಸಮಾಲೋಚಕರು 1, ಶುಶ್ರೂಷಕ ಅಧಿಕಾರಿ 1, ಎಪಿಡಮಾಲಜಿಸ್ಟ್ 2, ವೈದ್ಯಾಧಿಕಾರಿಗಳು 2, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 4, ಆರೋಗ್ಯ ನಿರೀಕ್ಷಣಾಧಿಕಾರಿಗಲು 2, ಶುಶ್ರೂಷಕ ಅಧಿಕಾರಿಗಳು 4, ವೈದ್ಯಾಧಿಕಾರಿಗಳು 4, ಆರೋಗ್ಯ ನಿರೀಕ್ಷಣಾಧಿಕಾರಿಗಳು 4, ಶುಶ್ರೂಷಕ ಅಧಿಕಾರಿಗಳು 5, ಹಿರಿಯ ವೈದ್ಯಾಧಿಕಾರಿ (ಡಿಆರ್ಟಿಬಿ ಕೇಂದ್ರ) 1, ವೈದ್ಯಾಧಿಕಾರಿ 1, ಕ್ಷಯರೋಗ ಆರೋಗ್ಯ ಸಂದರ್ಶಕ (ಟಿಬಿಎಚ್ವಿ) 1 ಹುದ್ದೆ ಸೇರಿದಂತೆ ಒಟ್ಟು 67 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗೆ ಜಿಲ್ಲಾ ಆರೋಗ್ಯ ಕಚೇರಿಯನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು DHFWS ಮೈಸೂರು ನೇಮಕಾತಿ ಅಧಿಸೂಚನೆ 2026 ಪ್ರಕಾರ, ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10, 12ನೇ ತರಗತಿ, ಡಿಪ್ಲೊಮಾ, GNM, ANM, MPW, DMLT, MLT, B.Sc, BDS, ಪದವಿ, D.Ch, DA, MBBS, MPH, DNB, MD ಸೇರಿದಂತೆ ಸಂಬಂಧಿತ ಶೈಕ್ಷಣಿಕ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು.

ಹುದ್ದೆಯ ಪ್ರಕಾರ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಮಾನದಂಡಗಳು ವಿಭಿನ್ನವಾಗಿರುವುದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಪರಿಶೀಲಿಸುವುದು ಅಗತ್ಯವಾಗಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಗೆ ಮುನ್ನ ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜೊತೆಗೆ ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳು, ವ್ಯಕ್ತಿವಿವರ ಮತ್ತು ಅನುಭವ ಪ್ರಮಾಣಪತ್ರಗಳು (ಅನ್ವಯಿಸಿದಲ್ಲಿ) ಮುಂತಾದ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸುವುದು ಒಳಿತು. ಈ ಕೆಳಗಿನ ಲಿಂಕ್ನಲ್ಲಿ ವಿವರವಾದ ಅಧಿಸೂಚನೆಯನ್ನು ನೋಡಬಹುದು:

https://pdfjobsjankari.com/dhfws-mysore-recruitment-2026-67-medical-nursing-officers-vacancies/#goog_rewarded

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News