ಸಾಂದರ್ಭಿಕ ಚಿತ್ರ - Photo Credit : PTI

ಗಾಝಾ: ಗಾಝಾ ಪಟ್ಟಿಯಲ್ಲಿ ರವಿವಾರ ವಾಹನವೊಂದನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ವಾಹನದಲ್ಲಿದ್ದ ಕನಿಷ್ಠ ಇಬ್ಬರು ಫೆಲೆಸ್ತೀನ್‌ ನಾಗರಿಕರು ಮೃತಪಟ್ಟಿದ್ದು, ಇತರ 13 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಪಶ್ಚಿಮ ಗಾಝಾ ನಗರದ ಟೆಲ್ ಅಲ್-ಹವಾ ನೆರೆಹೊರೆಯಲ್ಲಿ ನಡೆದ ಈ ದಾಳಿಯಿಂದಾಗಿ ವಾಹನವು ಸಂಪೂರ್ಣವಾಗಿ ಜಖಂಗೊಂಡಿದೆ. ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರಗೊಂಡಿರುವುದರಿಂದ ಮೃತರನ್ನು ಗುರುತಿಸಲು ನೆರವಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು `ರಾಯ್ಟರ್ಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor