ಯಮನ್ನಿಂದ 76,000 ಜನರ ಸ್ಥಳಾಂತರ: ವಿಶ್ವಸಂಸ್ಥೆ
Photo Credit ; un.org
ಜಿನೀವಾ: ಯಮನ್‍ನಲ್ಲಿ ಸರಕಾರಿ ಪಡೆಗಳು ಮತ್ತು ಹೌದಿಗಳ ನಡುವೆ ಹೋರಾಟ ತೀವ್ರಗೊಂಡ ಪರಿಣಾಮ, ಕಳೆದ ವಾರದಲ್ಲಿ ಸ್ಥಳಾಂತರಗೊಂಡವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದ್ದು, ಜುಲೈನಿಂದ ಕನಿಷ್ಠ 76,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಸ್ಥಳಾಂತರದ ಬಿಕ್ಕಟ್ಟು ಕ್ಷಣಕ್ಷಣಕ್ಕೂ ವೇಗವಾಗಿ ಹದಗೆಡುತ್ತಿದೆ. ಇಡೀ ಕುಟುಂಬಗಳು ಹೆಚ್ಚಾಗಿ ರಾತ್ರಿಯ ವೇಳೆಯಲ್ಲೇ ಸ್ಥಳಾಂತರಗೊಳ್ಳುತ್ತಿವೆ. ಅವರಿಗೆ ಸುರಕ್ಷಿತವಾಗಿರಲು ಯಾವುದೇ ಸ್ಥಳವಿಲ್ಲ ಎಂದು ಸಂಸ್ಥೆ ಎಚ್ಚರಿಸಿದೆ.