×
Ad

ಇರಾನ್ ಜೊತೆಗಿನ ಮಾತುಕತೆಗೆ ಒಪ್ಪಿಗೆ, ಆದರೆ ಕದನ ವಿರಾಮ ಅಂತ್ಯಗೊಂಡಿದೆ: ಡೊನಾಲ್ಡ್‌ ಟ್ರಂಪ್

Update: 2026-07-10 22:30 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್, ಜು.10: ಅಮೆರಿಕವು ಇರಾನ್ ಜೊತೆಗಿನ ಮಾತುಕತೆಗೆ ಒಪ್ಪಿಕೊಂಡಿದೆ, ಆದರೆ ಕದನ ವಿರಾಮವು ಮುಕ್ತಾಯಗೊಂಡಿದೆ ಎಂಬುದನ್ನು ಯಾವುದೇ ಗೊಂದಲವಿಲ್ಲದ ಸ್ಪಷ್ಟ ಶಬ್ದಗಳಲ್ಲಿ ಇರಾನ್‍ಗೆ ತಿಳಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

`ಮಾತುಕತೆಯನ್ನು ಮುಂದುವರಿಸುವಂತೆ ಇರಾನ್ ಇಸ್ಲಾಮಿಕ್ ಗಣರಾಜ್ಯವು ನಮ್ಮನ್ನು ವಿನಂತಿಸಿದೆ. ನಾವು ಅದಕ್ಕೆ ಒಪ್ಪಿದ್ದೇವೆ, ಆದರೆ ಕದನ ವಿರಾಮದ ಅವಧಿ ಮುಗಿದಿದೆ ಎಂಬುದನ್ನು ಅಮೆರಿಕ ಅವರಿಗೆ ಯಾವುದೇ ಸಂದೇಹವಿಲ್ಲದ ರೀತಿಯಲ್ಲಿ ಸ್ಪಷ್ಟಪಡಿಸಿದೆ' ಎಂದು ಟ್ರಂಪ್ ತಮ್ಮ `ಟ್ರೂತ್ ಸೋಷಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News