×
Ad

ಕಮಲ್ ಅದ್ವಾನ್ ಆಸ್ಪತ್ರೆ ಆವರಣದ ಮೇಲೆ ಇಸ್ರೇಲ್ ನಿಂದ ಡ್ರೋನ್ ದಾಳಿ; ಹಲವರಿಗೆ ಗಾಯ

Update: 2026-07-10 20:02 IST

ಸಾಂದರ್ಭಿಕ ಚಿತ್ರ |Photo Credit : aljazeera.com


ಗಾಝಾ: ಫೆಲೆಸ್ತೀನ್‌ ನ ಉತ್ತರ ಗಾಝಾದ ಬೀಟ್ ಲಾಹಿಯಾದಲ್ಲಿರುವ ಕಮಲ್ ಅದ್ವಾನ್ ಆಸ್ಪತ್ರೆಯ ಆವರಣದ ಮೇಲೆ ಇಸ್ರೇಲ್ ಕ್ವಾಡ್‌ಕಾಪ್ಟರ್ ಡ್ರೋನ್ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗಾಝಾದ ತುರ್ತು ಸೇವೆಗಳ ಮೂಲಗಳನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ.

ದಾಳಿಯಲ್ಲಿ ಕಮಲ್ ಅದ್ವಾನ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ನ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸಚಿವಾಲಯದ ಪ್ರಕಾರ, ಇಸ್ರೇಲಿ ಕ್ವಾಡ್‌ಕಾಪ್ಟರ್ ಡ್ರೋನ್ ಆಸ್ಪತ್ರೆಯ ಆವರಣದೊಳಗೆ ಸ್ಫೋಟಕ ಸಾಧನವನ್ನು ಬೀಳಿಸಿದ್ದು, ಅದರ ಪರಿಣಾಮ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಆರೋಗ್ಯ ಸೌಲಭ್ಯಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಇಸ್ರೇಲ್ ವ್ಯವಸ್ಥಿತವಾಗಿ ಗುರಿಯಾಗಿಸಿಕೊಳ್ಳುತ್ತಿರುವುದು ಸಿಬ್ಬಂದಿ ಹಾಗೂ ರೋಗಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ.

ಆರೋಗ್ಯ ಸೌಲಭ್ಯಗಳಿಗೆ ತುರ್ತು ರಕ್ಷಣೆ ಒದಗಿಸುವಂತೆ ಹಾಗೂ ಇಸ್ರೇಲ್ ನಡೆಸುತ್ತಿದೆ ಎನ್ನಲಾದ ಉಲ್ಲಂಘನೆಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಸಮುದಾಯ ಮತ್ತು ಎಲ್ಲ ಮಾನವೀಯ ಸಂಸ್ಥೆಗಳಿಗೆ ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News