×
Ad

ಮೂಲಸೌಕರ್ಯಗಳ ಮೇಲೆ ದಾಳಿಯಾದರೆ ಸೂಕ್ತ ಪ್ರತಿಕ್ರಿಯೆ: ಇಸ್ರೇಲ್‍ಗೆ ಇರಾನ್ ಎಚ್ಚರಿಕೆ

Update: 2026-07-10 21:29 IST

Photo Credit : AP 

ಟೆಹರಾನ್, ಜು.10: ತನ್ನ ಮೂಲಸೌಕರ್ಯಗಳ ಮೇಲೆ ಯಾವುದೇ ದಾಳಿ ನಡೆದರೂ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್‍ನ ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯದರ್ಶಿ ಶುಕ್ರವಾರ ಇಸ್ರೇಲ್‍ಗೆ ಎಚ್ಚರಿಕೆ ಸಂದೇಶ ರವಾನಿಸಿರುವುದಾಗಿ ವರದಿಯಾಗಿದೆ.

ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು:

ತನ್ನ ದಾಳಿಗಳು ಮುಗಿದಿವೆ ಎಂದು ಅಮೆರಿಕ ಘೋಷಿಸಿದ ನಂತರ, ಇರಾನ್ ಮೇಲೆ ನಿಗೂಢ ಹಾಗೂ ಯಾರೂ ಹೊಣೆ ಹೊತ್ತುಕೊಳ್ಳದ ಸರಣಿ ವೈಮಾನಿಕ ದಾಳಿ ನಡೆದಿವೆ. ಗುರುವಾರ ನಡೆದ ಈ ದಾಳಿಗಳು ದಕ್ಷಿಣ ಇರಾನ್‍ನ ವಿವಿಧ ಪ್ರದೇಶಗಳಿಗೆ ಅಪ್ಪಳಿಸಿವೆ. ಇರಾನ್‍ನ ಸರಕಾರವು ಈ ದಾಳಿಗಳಿಗೆ ಯಾರನ್ನೂ ನೇರವಾಗಿ ಹೊಣೆ ಮಾಡಿಲ್ಲ.

ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್‍ನ ಸಂಸದರು ಯುಎಇಗೆ ಎಚ್ಚರಿಕೆ ನೀಡಿದ್ದಾರೆ.

ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗದಂತೆ ತಡೆಯಲು ಮತ್ತು ಸಂವಹನ ಮಾರ್ಗಗಳನ್ನು ಮುಕ್ತವಾಗಿಡುವ ಪ್ರಯತ್ನವಾಗಿ ಖತರ್, ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮತ್ತು ಸೌದಿ ಅರೇಬಿಯಾದ ಅಧಿಕಾರಿಗಳು ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳೊಂದಿಗೆ ದೂರವಾಣಿ ಕರೆಗಳ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News