×
Ad

ಪುಟಿನ್ ರತ್ನಗಂಬಳಿ ಸ್ವಾಗತ; ಮೋದಿಗೆ ಖಾಸಗಿ ಔತಣ!

Update: 2024-07-09 09:51 IST

photo: x.com/narendramodi

ಮಾಸ್ಕೊ: ಭಾರತ- ರಷ್ಯಾ ವಾರ್ಷಿಕ ಶೃಂಗಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಮವಾರ ಅತಿಥೇಯ ದೇಶ ರತ್ನಗಂಬಳಿ ಸ್ವಾಗತ ನೀಡಿದೆ. ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದೆ. ಮಂಗಳವಾರದ ಮಾತುಕತೆಗೆ ಪೂರ್ವಭಾವಿಯಾಗಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ನರೇಂದ್ರ ಮೋದಿಯವರಿಗೆ ಖಾಸಗಿ ಔತಣಕೂಟ ಆಯೋಜಿಸಿದ್ದರು.

ಭಾರತ ರಷ್ಯಾದಿಂದ ಖರೀದಿಸುವ ತೈಲ ಆಮದು ಹೆಚ್ಚಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರ ಮತ್ತಷ್ಟು ವೃದ್ಧಿಸಿದೆ ಎಂದು ಪುಟಿನ್ ಬಣ್ಣಿಸಿದರು.

ಉಭಯ ಗಣ್ಯರ ಅಧಿಕೃತ ಭೆಟಿಯು ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದು, ಇಂಧನ, ವ್ಯಾಪಾರ, ಉತ್ಪಾದನೆ ಮತ್ತು ರಸಗೊಬ್ಬರ ಕ್ಷೇತ್ರಗಳ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಬಗ್ಗೆಯೂ ಮೋದಿ ಪ್ರಸ್ತಾವಿಸುವ ಸಾಧ್ಯತೆ ಇದ್ದು, "ಯುದ್ಧರಂಗದಿಂದ ಯಾವ ಸಮಸ್ಯೆಗೂ ಪರಿಹಾರ ದೊರಕದು" ಎಂಬ ಭಾರತದ ನಿಲುವನ್ನು ಪುಟಿನ್ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಷ್ಯಾಗೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡುತ್ತಿರುವ ಮೋದಿಯವರು, ಹಲವು ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News