×
Ad

ಪಾಕಿಸ್ತಾನದಲ್ಲಿನ ಐಸಿಸ್ ನೆಲೆಗಳ ಮೇಲೆ ಅಫ್ಘಾನಿಸ್ತಾನದಿಂದ ವೈಮಾನಿಕ ದಾಳಿ

Update: 2026-07-01 21:13 IST

 Photo Credit : x

ಕಾಬೂಲ್, ಜು.1: ಅಫ್ಘಾನಿಸ್ತಾನದ ವಾಯುಪಡೆಯು ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿರುವ ಐಸಿಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ.

ಅಫ್ಘಾನ್ ಯುದ್ಧವಿಮಾನಗಳು ಬಲೂಚಿಸ್ತಾನದ ಪಿಶಿನ್ ಜಿಲ್ಲೆಯ ಸರನಾನ್ ಪ್ರದೇಶದಲ್ಲಿರುವ ಐಸಿಸ್ ಜಂಟಿ ಕೇಂದ್ರವನ್ನು ಹಾಗೂ ಖೈಬರ್ ಪಖ್ತುಂಖ್ವಾದ ಚಿತ್ರಾಲ್‍ನ ಶಾ ಸಲೀಮ್ ಕಣಿವೆ ಮತ್ತು ಕಂಬಾರ್ ಖೇಲ್‍ನಲ್ಲಿರುವ ಇತರ ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಅಫ್ಘಾನಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳು ಮತ್ತು ನಾಗರಿಕರ ಮೇಲಿನ ದಾಳಿಗಳನ್ನು ಸಂಯೋಜಿಸಲು ಈ ನೆಲೆಗಳನ್ನು ಬಳಸಲಾಗುತ್ತಿತ್ತು ಎಂದು ತಾಲಿಬಾನ್ ಮೂಲಗಳನ್ನು ಉಲ್ಲೇಖಿಸಿ ಟೋಲೊ ನ್ಯೂಸ್ ವರದಿ ಮಾಡಿದೆ.

ಈ ದಾಳಿಗಳನ್ನು ಅತ್ಯಂತ ನಿಖರವಾಗಿ ನಡೆಸಲಾಗಿದ್ದು, ಐಸಿಸ್‍ಗೆ ಭಾರಿ ಸಾವುನೋವು ಮತ್ತು ವಸ್ತುಹಾನಿ ಸಂಭವಿಸಿದೆ. ಸರನಾನ್ ಪ್ರದೇಶದಲ್ಲಿ ಐಸಿಸ್ ಸದಸ್ಯರು ಬಳಸುತ್ತಿದ್ದ ಶಾಲೆಯೊಂದೂ ಸಹ ಈ ದಾಳಿಯ ಗುರಿಗಳಲ್ಲಿ ಸೇರಿತ್ತು. ಆದರೆ ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News