ನಿರ್ಬಂಧಗಳ ಪಟ್ಟಿಯಿಂದ 4 ಭಾರತೀಯ ಕಂಪೆನಿಗಳನ್ನು ಕೈಬಿಟ್ಟ ಅಮೆರಿಕ
Update: 2026-07-01 21:52 IST
ಸಾಂದರ್ಭಿಕ ಚಿತ್ರ | Photo Credit : X
ವಾಶಿಂಗ್ಟನ್, ಜು.1: ರಶ್ಯದ ಸೇನಾ-ಕೈಗಾರಿಕಾ ನೆಲೆಗೆ ಸುಧಾರಿತ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಪೂರೈಸಿದ ಆರೋಪ ಹೊತ್ತಿದ್ದ ನಾಲ್ಕು ಭಾರತೀಯ ಕಂಪೆನಿಗಳನ್ನು ಅಮೆರಿಕ ತನ್ನ ನಿರ್ಬಂಧಗಳ ಪಟ್ಟಿಯಿಂದ ಮುಕ್ತಗೊಳಿಸಿದೆ.
ಈ ಕಂಪೆನಿಗಳನ್ನು ಅಮೆರಿಕದ ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯ `ವಿಶೇಷವಾಗಿ ಗೊತ್ತುಪಡಿಸಿದ ನಾಗರಿಕರು ಮತ್ತು ನಿಬರ್ಂಧಿತ ವ್ಯಕ್ತಿಗಳ' ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಅಮೆರಿಕದ ಹಣಕಾಸು ಇಲಾಖೆಯು ಮಂಗಳವಾರ ಹಂಚಿಕೊಂಡಿರುವ ವಿವರಗಳ ಪ್ರಕಾರ, ಈ ನಾಲ್ಕು ಕಂಪನಿಗಳಲ್ಲಿ ಹೈದರಾಬಾದ್ ಮೂಲದ ಆರ್‍ಆರ್‍ಜಿ ಇಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೋಕೇಶ್ ಮಷೀನ್ಸ್ ಲಿಮಿಟೆಡ್, ಅಹಮದಾಬಾದ್ ಮೂಲದ ಗ್ಯಾಲಕ್ಸಿ ಬೇರಿಂಗ್ಸ್ ಮತ್ತು ನವದೆಹಲಿ ಮೂಲದ ಶೌರ್ಯ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸೇರಿವೆ.