×
Ad

ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಿದ ಶ್ರೀಲಂಕಾ

Update: 2026-07-01 21:54 IST

ಸಾಂದರ್ಭಿಕ ಚಿತ್ರ | Photo Credit : PTI

ಕೊಲಂಬೊ, ಜು.1: ಎಂಟು ತಿಂಗಳ ಹಿಂದೆ 643 ಜನರ ಸಾವಿಗೆ ಕಾರಣವಾಗಿದ್ದ ಭೀಕರ ಚಂಡಮಾರುತದ ನಂತರ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರಕಾರ ಕೊನೆಗೊಳಿಸಿದೆ ಎಂದು ಬುಧವಾರ ಮಾಧ್ಯಮ ಸಚಿವ ನಲಿಂಡಾ ಜಯತಿಸ್ಸಾ ತಿಳಿಸಿದ್ದಾರೆ.

2025ರ ನವೆಂಬರ್‍ನಲ್ಲಿ `ದಿತ್ವಾ' ಚಂಡಮಾರುತದಿಂದ ವ್ಯಾಪಕ ಸಾವು-ನೋವು, ನಾಶ-ನಷ್ಟ ಉಂಟಾದ ಬೆನ್ನಲ್ಲೇ ಅಧ್ಯಕ್ಷ ಅನುರ ಕುಮಾರ ಡಿಸ್ಸಾನಾಯಕೆ ಅವರು ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದರು. ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸೈನಿಕರನ್ನು ನಿಯೋಜಿಸಲು ಅನುಮತಿಸುವ ಈ ಅಸಾಧಾರಣ ಅಧಿಕಾರಗಳನ್ನು ಪ್ರತಿ ತಿಂಗಳು ವಿಸ್ತರಿಸಲಾಗುತ್ತಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News