×
Ad

ಅಮೆರಿಕದ ಮೇಲೆ ಪ್ರತೀಕಾರ ಸುಂಕ ಘೋಷಿಸಿದ ಇಯು

Update: 2025-03-12 21:02 IST

Photo Credit | AP

ಬ್ರಸೆಲ್ಸ್: ಸ್ಟೀಲ್ ಮತ್ತು ಅಲ್ಯುಮೀನಿಯಂ ಆಮದುಗಳ ಮೇಲೆ 25% ಸುಂಕ ಜಾರಿಗೊಂಡಿರುವುದಾಗಿ ಅಮೆರಿಕ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ಪ್ರತೀಕಾರ ಸುಂಕವನ್ನು ಯುರೋಪಿಯನ್ ಯೂನಿಯನ್(ಇಯು) ಘೋಷಿಸಿದ್ದು ಎಪ್ರಿಲ್ 1ರಿಂದ ಜಾರಿಗೆ ಬರುವುದಾಗಿ ಹೇಳಿದೆ.

ಇದರ ಪ್ರಕಾರ ಅಮೆರಿಕದಿಂದ ಆಮದಾಗುವ 28 ಶತಕೋಟಿ ಡಾಲರ್ ಮೊತ್ತದ ಸರಕುಗಳು ಹೆಚ್ಚುವರಿ ಸುಂಕದ ವ್ಯಾಪ್ತಿಯಡಿ ಬರಲಿದೆ. ಸ್ಟೀಲ್ ಮತ್ತು ಅಲ್ಯುಮೀನಿಯಂ ಉತ್ಪನ್ನಗಳು, ಜವಳಿ, ಗೃಹ ಬಳಕೆಯ ವಸ್ತುಗಳು ಮತ್ತು ಕೃಷ್ಯುತ್ಪನ್ನಗಳ ಆಮದಿಗೆ ಈ ಕ್ರಮ ಅನ್ವಯಿಸುತ್ತದೆ. `ಅಮೆರಿಕ ನಮ್ಮ ವಿರುದ್ಧ 28 ಶತಕೋಟಿ ಡಾಲರ್ ಮೊತ್ತದಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರಿಂದ ನಾವು ಪ್ರತೀಕಾರ ಸುಂಕ ವಿಧಿಸುತ್ತೇವೆ. ನಾವು ಯಾವತ್ತೂ ಮಾತುಕತೆಗೆ ಮುಕ್ತವಾಗಿದ್ದೇವೆ. ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಗಳಿಂದ ತುಂಬಿರುವ ಜಗತ್ತಿನಲ್ಲಿ, ನಮ್ಮ ಆರ್ಥಿಕತೆಯನ್ನು ಸುಂಕದಿಂದ ಹೊರೆಯಾಗಿಸುವುದು ನಮ್ಮ ಸಾಮಾನ್ಯ ಹಿತಾಸಕ್ತಿಗೆ ಪೂರಕವಾಗಿಲ್ಲ' ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡೆರ್ ಲೆಯೆನ್ ಹೇಳಿರುವುದಾಗಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News