ವೊಲೊಡಿಮಿರ್ ಝೆಲೆನ್‍ಸ್ಕಿ | Photo Credit : PTI 

ಕೀವ್: ರಶ್ಯ ಮೇಲಿನ ನಿರ್ಬಂಧಗಳನ್ನು ತಡೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ `ಬಹುಮಾನ' ನೀಡಿದಂತಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಶನಿವಾರ ಹೇಳಿದ್ದಾರೆ.

ಉಕ್ರೇನ್‍ನ ಇಂಧನ ಜಾಲದ ಮೇಲಿನ ಅತ್ಯಂತ ದೊಡ್ಡ ದಾಳಿಗಳಲ್ಲಿ ಒಂದಾದ, 15 ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ರಶ್ಯಾ ದಾಳಿ ನಡೆಸಿದ ದಿನವೇ ಈ ನಿರ್ಧಾರ ಬಂದಿದೆ. ಚಳಿಗಾಲಕ್ಕೆ ಮುನ್ನ ಲಕ್ಷಾಂತರ ಉಕ್ರೇನಿಯನ್ನರನ್ನು ವಿದ್ಯುತ್‍ನಿಂದ ವಂಚಿತರನ್ನಾಗಿ ಮಾಡಲು ಮಾಸ್ಕೋ ಯತ್ನಿಸುತ್ತಿದೆ ಎಂದು ಝೆಲೆನ್‍ಸ್ಕಿ ಎಚ್ಚರಿಸಿದ್ದಾರೆ.

`ಲಿಂಡ್ಸೆ ಗ್ರಹಾಂ ಕಾಯಿದೆ'ಯನ್ನು ಉಲ್ಲೇಖಿಸಿದ ಅವರು ` ಯುದ್ಧವನ್ನು ಕೊನೆಗೊಳಿಸಲು ರಶ್ಯದ ಮೇಲೆ ನಿಜವಾದ ಪರಿಣಾಮಕಾರಿ ಒತ್ತಡ ಹೇರಲು ಈ ಕಾಯಿದೆಯನ್ನು ತರಲಾಗಿತ್ತು. ಇದು ಉಕ್ರೇನ್‍ಗೆ ಅಪಾರವಾಗಿ ನೆರವಾಗಬಹುದಿತ್ತು. ಆದರೆ ಅಮೆರಿಕ ನಿರ್ಬಂಧಗಳನ್ನು ತಡೆಹಿಡಿಯುವುದು, ದಾಳಿಕೋರನ ಮೇಲಿನ ಒತ್ತಡವನ್ನು ಸಡಿಲಗೊಳಿಸುತ್ತದೆ' ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor