ಅರ್ಜೆಂಟೀನಾ ಕಾಡ್ಗಿಚ್ಚು: ಒಬ್ಬ ಮೃತ್ಯು; 800 ಮಂದಿ ಸ್ಥಳಾಂತರ
ಸಾಂದರ್ಭಿಕ ಚಿತ್ರ
ಬ್ಯೂನಸ್ ಐರಿಸ್: ಅರ್ಜೆಂಟೀನಾದ ಜನಪ್ರಿಯ ಪ್ರವಾಸೀ ತಾಣ ಎಲ್ ಬಾಲ್ಸನ್‍ನಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಕಾಡ್ಗಿಚ್ಚು ಈಗಾಗಲೇ ಸುಮಾರು 3000 ಹೆಕ್ಟೇರ್ ಪ್ರದೇಶವನ್ನು ಸುಟ್ಟುಹಾಕಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮುನ್ನೆಚ್ಚರಿಕೆ ಕ್ರಮವಾಗಿ 800ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ಯಾಟಗೋನಿಯಾ ಪರ್ವತ ಪ್ರದೇಶದ ಸುಂದರ ಪ್ರವಾಸೀ ತಾಣ ಎಲ್ ಬಾಲ್ಸನ್‍ನಲ್ಲಿ ಕಾಡ್ಗಿಚ್ಚಿನಿಂದ ವ್ಯಾಪಕ ನಾಶ-ನಷ್ಟ ಉಂಟಾಗಿದೆ. ಮನೆಯೊಳಗಿದ್ದ ಓರ್ವ ವ್ಯಕ್ತಿ ಹೊಗೆಯಿಂದ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ ಎಂದು ರಿಯೊ ನೆಗ್ರೋ ಪ್ರಾಂತದ ಗವರ್ನರ್ ಆಲ್ಬರ್ಟೋ ವೆರೆಟಿಲ್ನೆಕ್ ಹೇಳಿದ್ದಾರೆ. ಎಲ್ ಬಾಲ್ಸನ್ ನಗರಕ್ಕಿಂತ 20 ಕಿ.ಮೀ ದೂರದ ಅಂಪ್ರೇಲ್ ಪ್ರಾಂತದಲ್ಲಿ ಗುರುವಾರ ಕಾಣಿಸಿಕೊಂಡ ಕಾಡ್ಗಿಚ್ಚು ಗಾಳಿ ಮತ್ತು ಅತ್ಯಧಿಕ ತಾಪಮಾನದಿಂದಾಗಿ ಕ್ಷಿಪ್ರಗತಿಯಲ್ಲಿ ಹರಡಿದೆ. ಶುಕ್ರವಾರ ರಿಯೊ ನೆಗ್ರೋ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.