×
Ad

ಅರಿಝೋನ: ರೆಸ್ಟಾರೆಂಟ್‍ನಲ್ಲಿ ಶೂಟೌಟ್; 3 ಮಂದಿ ಸಾವು

Update: 2025-05-05 23:24 IST

PC | x.com/TheRebelPatient

ನ್ಯೂಯಾರ್ಕ್: ಅಮೆರಿಕದ ಅರಿಝೋನಾದ ಫೋನೆಕ್ಸ್ ನಗರದ ಬಳಿ ರೆಸ್ಟಾರೆಂಟ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು ಇತರ ಐದು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ರವಿವಾರ ತಡರಾತ್ರಿ ಗುರುತಿಸಲಾಗದ ಬಂದೂಕುಧಾರಿಗಳು ರೆಸ್ಟಾರೆಂಟ್‍ನಲ್ಲಿ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಐದು ಮಂದಿ ಮೃತಪಟ್ಟಿದ್ದು ಇತರ ಐವರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ದುಷ್ಕರ್ಮಿಗಳ ಪತ್ತೆಕಾರ್ಯಾಚರಣೆ ಮುಂದುವರಿದಿದ್ದು ಹಲವರನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News