ಇಸ್ರೇಲ್ ಗೆ ಮಹತ್ಮಾ ಗಾಂಧಿಯ ಹೇಳಿಕೆ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ ಲೆಬನಾನ್ ರಾಯಭಾರಿ
Credit: PTI Photo
ಹೊಸದಿಲ್ಲಿ: ಹಸನ್ ನಸ್ರುಲ್ಲಾ ಅವರ ಉತ್ತರಾಧಿಕಾರಿಗಳನ್ನು ಕೊಲ್ಲುವುದಾಗಿ ಇಸ್ರೇಲ್ ಘೋಷಿಸಿರುವ ಬಗ್ಗೆ ಭಾರತದಲ್ಲಿನ ಲೆಬನಾನ್ ರಾಯಭಾರಿ ರಾಬಿ ನಾರ್ಶ್ ಮಹಾತ್ಮ ಗಾಂಧಿಯವರ ಮಾತುಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದು, ಹಿಜ್ಬುಲ್ಲಾ ಜನರ ಬೆಂಬಲ ಹೊಂದಿರುವ ಕಾನೂನುಬದ್ಧ ರಾಜಕೀಯ ಪಕ್ಷವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಲೆಬನಾನ್ ರಾಯಭಾರಿ ರಾಬಿ ನಾರ್ಶ್, ನೀವು ಕ್ರಾಂತಿಕಾರಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಮಹತ್ಮಾ ಗಾಂಧಿಯ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಹಿಜ್ಬುಲ್ಲಾ ನಾಯಕರನ್ನು ನೀವು ನಿರ್ಮೂಲನೆ ಮಾಡಬಹುದು ಆದ್ರೆ ಹಿಜ್ಬುಲ್ಲಾವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಿಜ್ಬುಲ್ಲಾದಲ್ಲಿರುವವರು ಈ ನೆಲದ ಜನರೇ ಆಗಿದ್ದಾರೆ. ಹಿಜ್ಬುಲ್ಲಾ ಪ್ಯಾರಾಚೂಟ್ ಮೂಲಕ ಲೆಬನಾನ್ಗೆ ಬಂದ ಕಾಲ್ಪನಿಕ ರಚನೆಯಲ್ಲ. ಇಸ್ರೇಲ್ ನ ಕ್ರೂರತೆ ವಿರುದ್ಧ ಹಿಜ್ಬುಲ್ಲಾ ಚಳುವಳಿ ನಡೆಸುತ್ತದೆ. ನಾಯಕರನ್ನು ನಿರ್ಮೂಲನೆ ಮಾಡುವ ಮೂಲಕ ಹಿಜ್ಬುಲ್ಲಾವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಭಾರತದ ರಾಯಭಾರಿ ರಾಬಿ ನರ್ಶ್ ಹೇಳಿದ್ದಾರೆ.
ಮಂಗಳವಾರ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಸನ್ ನಸ್ರುಲ್ಲಾ ಮಾತ್ರವಲ್ಲ, ಅವರ ಉತ್ತರಾಧಿಕಾರಿಗಳನ್ನು ಕೂಡ ಇಸ್ರೇಲ್ ಗುರಿಯಾಗಿಸಲಿದೆ ಎಂದು ಹೇಳಿದ್ದರು.