×
Ad

ಲಿಬಿಯಾಕ್ಕೆ ಏಶ್ಯನ್ ವಲಸಿಗರ ಗಡೀಪಾರಿಗೆ ಅಮೆರಿಕ ನ್ಯಾಯಾಲಯ ನಿರ್ಬಂಧ

Update: 2025-05-08 21:12 IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಏಶ್ಯನ್ ವಲಸಿಗರನ್ನು ಯುದ್ಧದಿಂದ ಜರ್ಜರಿತಗೊಂಡಿರುವ ಲಿಬಿಯಾಕ್ಕೆ ಗಡೀಪಾರು ಮಾಡುವ ಟ್ರಂಪ್ ಆಡಳಿತದ ನಿರ್ಧಾರಕ್ಕೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ಬುಧವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.

ಗಡೀಪಾರಿನ ಭೀತಿಯಲ್ಲಿರುವ ವಲಸಿಗರ ಪರವಾಗಿ ಸಲ್ಲಿಸಿದ್ದ ಮೇಲ್ಮನವಿಯ ತುರ್ತು ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಬ್ರಿಯಾನ್ ಮರ್ಫಿ `ಇಂತಹ ಗಡೀಪಾರುಗಳು ತಾನು ಈ ಹಿಂದೆ ನೀಡಿದ್ದ ಆದೇಶವನ್ನು ಉಲ್ಲಂಘಿಸುತ್ತವೆ ಎಂದು ತೀರ್ಪು ನೀಡಿದ್ದಾರೆ. ತಮ್ಮ ಸ್ವಂತ ದೇಶವನ್ನು ಹೊರತುಪಡಿಸಿ ಬೇರೆ ದೇಶಕ್ಕೆ ವಲಸಿಗರನ್ನು ಕಳುಹಿಸುವ ಸಂದರ್ಭದಲ್ಲಿ ಮೊದಲು ಅವರಿಗೆ ಗಡೀಪಾರನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅರ್ಥಪೂರ್ಣ ಅವಕಾಶ ನೀಡಬೇಕು ಎಂದು ನ್ಯಾಯಾಧೀಶರು ಇತ್ತೀಚೆಗೆ ಪ್ರತ್ಯೇಕ ಪ್ರಕರಣದಲ್ಲಿ ಆದೇಶ ನೀಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಗೆ ಕುಖ್ಯಾತಿ ಪಡೆದಿರುವ ಲಿಬಿಯಾಕ್ಕೆ ಗಡೀಪಾರು ಮಾಡುವುದಕ್ಕೆ ತಡೆಯಾಜ್ಞೆ ಕೋರಿ ಲಾವೋಸ್, ಫಿಲಿಪ್ಪೀನ್ಸ್ ಮತ್ತು ವಿಯೆಟ್ನಾಮ್ ಮೂಲದ ವಲಸಿಗರ ಪರ ಮೇಲ್ಮನವಿ ಸಲ್ಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News