ಪ್ರಧಾನಿಗೆ ಬ್ರಿಕ್ಸ್ ಶೃಂಗಸಭೆಗೆ ಆಹ್ವಾನಿಸಿಲ್ಲ: ಬಾಂಗ್ಲಾದೇಶ ಸರಕಾರ ಹೇಳಿಕೆ
ಹುಮಾಯೂನ್ ಕಬೀರ್ | Photo Credit : X
ಢಾಕಾ: ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ದಿಲ್ಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸದೇ ಇರಬಹುದು. ಏಕೆಂದರೆ ಪ್ರಧಾನಿಯವರಿಗೆ ಈ ಶೃಂಗಸಭೆಗೆ ಆಹ್ವಾನ ತಲುಪಿಲ್ಲ. ಬದಲಾಗಿ `ಬಿಮ್‍ಸ್ಟೆಕ್' ಅಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಹೇಳಿದ್ದಾರೆ.
ನಾವು ಹೇಗೆ ಹೋಗಲು ಸಾಧ್ಯ? ನಮ್ಮ ಪ್ರಧಾನಮಂತ್ರಿಗೆ ಆಹ್ವಾನ ಬಂದಿಲ್ಲ. ಬಿಮ್‍ಸ್ಟೆಕ್ (ಬಂಗಾಳ ಕೊಲ್ಲಿಯ ವ್ಯಾಪಕ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿನ ಪ್ರಾದೇಶಿಕ ಒಕ್ಕೂಟ) ಅಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ ಎಂದು ಕಬೀರ್ ಹೇಳಿರುವುದಾಗಿ ಬಾಂಗ್ಲಾದೇಶದ `ದಿ ಡೈಲಿ ಸ್ಟಾರ್' ಪತ್ರಿಕೆ ವರದಿ ಮಾಡಿದೆ.
ಬಿಮ್‍ಸ್ಟೆಕ್ ಪ್ರಾದೇಶಿಕ ಒಕ್ಕೂಟದ ಪ್ರಸ್ತುತ ಅಧ್ಯಕ್ಷರು ಎಂಬ ನೆಲೆಯಲ್ಲಿ ಶೃಂಗಸಭೆಯ `ಔಟ್‍ರೀಚ್' ಗೋಷ್ಠಿಯಲ್ಲಿ ಭಾಗವಹಿಸಲು ಆತಿಥೇಯ ಭಾರತವು ರೆಹಮಾನ್ ಅವರಿಗೆ ಆಹ್ವಾನ ನೀಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿಮ್‍ಸ್ಟೆಕ್ ಎಂಬುದು ಭಾರತ, ಶ್ರೀಲಂಕಾ, ಥೈಲ್ಯಾಂಡ್, ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್ ದೇಶಗಳನ್ನೊಳಗೊಂಡ ಒಂದು ಪ್ರಾದೇಶಿಕ ಒಕ್ಕೂಟವಾಗಿದೆ.