Credit: X/@Unknown_13742

ಬೀಜಿಂಗ್: ಚೀನಾದ ಹಡಗು ರವಾನೆ ಕೇಂದ್ರವಾದ ಚಿಂಗ್ಡಾವೊ ಬಂದರಿನಲ್ಲಿ ತಂಗಿದ್ದ ಸರಕು ನೌಕೆಯಲ್ಲಿ ಗುರುವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ `ಕ್ಸಿನ್‍ಹುವಾ' ಮಾಧ್ಯಮ ತಿಳಿಸಿದೆ.

ಲೈಬೀರಿಯನ್ ಧ್ವಜದ ಅಡಿಯಲ್ಲಿ ಪ್ರಯಾಣಿಸುವ `ಓಷನ್ ಮೆಲೊಡಿ' ಹಡಗನ್ನು ನಿರ್ವಹಣಾ ಕಾರ್ಯಕ್ಕಾಗಿ ಬಂದರಿನಲ್ಲಿ ನಿಲ್ಲಿಸಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಒಟ್ಟು 42 ಜನರಿದ್ದರು. 17 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಐವರು ಗಾಯಗೊಂಡಿದ್ದಾರೆ. 25 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor