×
Ad

ಬಾಂಗ್ಲಾ: ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣದಾಸ್‍ಗೆ ಜಾಮೀನು

Update: 2025-04-30 20:56 IST

 ಚಿನ್ಮಯ್ ಕೃಷ್ಣದಾಸ್‍ | PTI 

ಢಾಕ: ಇಸ್ಕಾನ್ ನ ಮಾಜಿ ಮುಖಂಡ, ಹಿಂದು ಸನ್ಯಾಸಿ ಚಿನ್ಮಯ್ ಕೃಷ್ಣದಾಸ್‍ಗೆ ಬಾಂಗ್ಲಾದೇಶದ ಹೈಕೋರ್ಟ್ ಬುಧವಾರ ಜಾಮೀನು ಮಂಜೂರುಗೊಳಿಸಿರುವುದಾಗಿ ವರದಿಯಾಗಿದೆ.

ದೇಶದ್ರೋಹದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ದಾಸ್‍ರನ್ನು 2024ರ ನವೆಂಬರ್‌ ನಲ್ಲಿ ಬಾಂಗ್ಲಾದೇಶದಲ್ಲಿ ಬಂಧಿಸಲಾಗಿತ್ತು. ಜಾಮೀನು ಕೋರಿ ದಾಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‍ನ ಎರಡು ನ್ಯಾಯಾಧೀಶರ ನ್ಯಾಯಪೀಠ ಪುರಸ್ಕರಿಸಿದ್ದು, ಸುಪ್ರೀಂಕೋರ್ಟ್‍ನ ಮೇಲ್ಮನವಿ ವಿಭಾಗ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡದಿದ್ದರೆ ದಾಸ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News