×
Ad

ಮುಜಿಬುರ್ ಮನೆ ಧ್ವಂಸದ ಬಗ್ಗೆ ಭಾರತದಿಂದ ಅನಗತ್ಯ ಹೇಳಿಕೆ: ಬಾಂಗ್ಲಾದೇಶದ ಸರಕಾರ ಟೀಕೆ

Update: 2025-02-10 20:26 IST

Photo Credit | AP/PTI

ಢಾಕಾ: ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ ನಿವಾಸಕ್ಕೆ ನುಗ್ಗಿದ ಸಾವಿರಾರು ಪ್ರತಿಭಟನಾಕಾರರು ಮನೆಯನ್ನು ಧ್ವಂಸಗೊಳಿಸಿದ ಘಟನೆ ದೇಶದ ಆಂತರಿಕ ವ್ಯವಹಾರವಾಗಿದ್ದು ಈ ಬಗ್ಗೆ ಭಾರತ ನೀಡಿರುವ ಪ್ರತಿಕ್ರಿಯೆ ಅನಿರೀಕ್ಷಿತ ಮತ್ತು ಅನಗತ್ಯ ಎಂದು ಮಧ್ಯಂತರ ಸರಕಾರ ಟೀಕಿಸಿದೆ.

1971ರಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದಿರುವುದನ್ನು ಇದೇ ನಿವಾಸದಲ್ಲಿ ರಹಮಾನ್ ಘೋಷಿಸಿದ್ದರು. ಈ ಐತಿಹಾಸಿಕ ನಿವಾಸವನ್ನು ಮ್ಯೂಸಿಯಂ ಆಗಿ ಈ ಹಿಂದಿನ ಸರಕಾರ ಪರಿವರ್ತಿಸಿತ್ತು. ಈ ವಿಧ್ವಂಸಕ ಕೃತ್ಯವನ್ನು ಬಲವಾಗಿ ಖಂಡಿಸುವುದಾಗಿ ಭಾರತದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ವಿದೇಶಾಂಗ ಇಲಾಖೆಯ ವಕ್ತಾರರು `ಮುಜಿಬುರ್ ಅವರ ನಿವಾಸದಲ್ಲಿ ನಡೆದ ಘಟನೆ ದೇಶದ ಆಂತರಿಕ ವ್ಯವಹಾರವಾಗಿದೆ. ಬಾಂಗ್ಲಾದೇಶವು ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಎಂದಿಗೂ ಹಸ್ತಕ್ಷೇಪ ನಡೆಸಿಲ್ಲ ಮತ್ತು ಇತರ ದೇಶಗಳಿಂದಲೂ ಇದೇ ನಿಲುವನ್ನು ಬಯಸುತ್ತದೆ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News