×
Ad

ಬ್ರಿಟನ್ ಆರೋಗ್ಯ ಸಚಿವ ವೆಸ್ ಸ್ಟ್ರೀಟಿಂಗ್ ರಾಜೀನಾಮೆ

Update: 2026-05-14 21:23 IST

ವೆಸ್ ಸ್ಟ್ರೀಟಿಂಗ್ | Photo Credit : aljazeera.com 

ಲಂಡನ್, ಮೇ 14: ಬ್ರಿಟನ್‍ನ ಆರೋಗ್ಯ ಸಚಿವ ವೆಸ್ ಸ್ಟ್ರೀಟಿಂಗ್ ಗುರುವಾರ ರಾಜೀನಾಮೆ ನೀಡಿದ್ದು ಪ್ರಧಾನಿ ಕೀರ್ ಸ್ಟಾರ್ಮರ್ ಅವರ ನಾಯಕತ್ವದಲ್ಲಿ ವಿಶ್ವಾಸ ಕಳೆದುಕೊಂಡಿರುವುದು ರಾಜೀನಾಮೆ ನೀಡಲು ಕಾರಣ ಎಂದು ಹೇಳಿದ್ದಾರೆ.

ಕಳೆದ ವಾರ ನಡೆದಿದ್ದ ಸ್ಥಳೀಯ ಮತ್ತು ಪ್ರಾದೇಶಿಕ ಚುನಾವಣೆಗಳಲ್ಲಿ ಆಡಳಿತಾರೂಢ ಲೇಬರ್ ಪಕ್ಷಕ್ಕೆ ತೀವ್ರ ಹಿನ್ನಡೆಯಾದ ಬಳಿಕ ಪ್ರಧಾನಿ ಸ್ಟಾರ್ಮರ್ ಪದತ್ಯಾಗಕ್ಕೆ ಒತ್ತಡ ಹೆಚ್ಚುತ್ತಿದೆ. `ಕೀರ್ ಸ್ಟಾರ್ಮರ್ ನಾಯಕತ್ವದಲ್ಲಿ ವಿಶ್ವಾಸ ಕಳೆದುಕೊಂಡ ಬಳಿಕ ಸಚಿವ ಹುದ್ದೆಯಲ್ಲಿ ಮುಂದುವರಿಯುವುದು ಅಗೌರವ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಸ್ಟ್ರೀಟಿಂಗ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ಟಾರ್ಮರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿರುವ ಗುಂಪಿನಲ್ಲಿ ಸ್ಟ್ರೀಟಿಂಗ್ ಕೂಡಾ ಇದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News