×
Ad

ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯಕ್ಕೆ ಇರಾನ್ ಅತ್ಯಂತ ನಿಕಟವಾಗಿದೆ: ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್

Update: 2026-05-14 19:36 IST

ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ | Photo Credit : AP 

ವಾಶಿಂಗ್ಟನ್, ಮೇ 14: ಶಸ್ತ್ರಾಸ್ತ್ರ ಮಟ್ಟದ ಯುರೇನಿಯಂ ಅನ್ನು ಉತ್ಪಾದಿಸುವ ಸಾಮರ್ಥ್ಯಕ್ಕೆ ಇರಾನ್ ಅತ್ಯಂತ ಹತ್ತಿರದಲ್ಲಿದೆ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆಯ ಬಗ್ಗೆ ಸೆನೆಟ್‍ನ ಸಶಸ್ತ್ರ ಸೇವೆಗಳ ಸಮಿತಿ ಎದುರು ಹೇಳಿಕೆ ನೀಡಿದ ರೈಟ್ `ಇರಾನ್‍ನ ಪರಮಾಣು ಸಂವರ್ಧನೆಯ ಮಟ್ಟವು ಶಸ್ತ್ರಾಸ್ತ್ರ ದರ್ಜೆಯ ಸಾಮರ್ಥ್ಯಕ್ಕೆ ಅತೀ ಹತ್ತಿರದಲ್ಲಿವೆ. ಆದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಹೆಚ್ಚುವರಿ ಕ್ರಮಗಳು ಬೇಕಾಗುತ್ತದೆ. ಇನ್ನು ಕೆಲವೇ ವಾರಗಳಲ್ಲಿ ಅವರು ಶಸ್ತ್ರಾಸ್ತ್ರ ದರ್ಜೆಯ ಯುರೇನಿಯಂ ಉತ್ಪಾದಿಸುವ ಸಾಮರ್ಥ್ಯ ಗಳಿಸಿಕೊಳ್ಳಬಹುದು' ಎಂದು ಹೇಳಿದ್ದಾರೆ.

ಇರಾನ್ ಯುರೇನಿಯಂ ಅನ್ನು 60%ದವರೆಗೆ ಸಂವರ್ಧಿಸುವ ಸಾಮರ್ಥ್ಯ ಪಡೆದಿದೆ ಎಂದು ವರದಿಯಾಗಿದ್ದು ಇದು ನಾಗರಿಕ ಬಳಕೆಯ ಪರಮಾಣು ಶಕ್ತಿಗೆ ಅಗತ್ಯವಿರುವ ಹಂತಕ್ಕಿಂತ ತುಂಬಾ ಅಧಿಕವಾಗಿದೆ ಮತ್ತು ಶಸ್ತ್ರಾಸ್ತ್ರ ಉತ್ಪಾದಿಸಲು ಅಗತ್ಯವಿರುವ 90%ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ ಎಂದು ಕ್ರಿಸ್ ರೈಟ್ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News