ಬ್ರಿಟನ್ ಪ್ರಧಾನಿಯ ಮನೆಯತ್ತ ಗುಂಡು ಹಾರಿಸಿದ ವ್ಯಕ್ತಿಯ ಬಂಧನ
Update: 2025-05-13 21:27 IST
PC : NDTV
ಲಂಡನ್: ಉತ್ತರ ಲಂಡನ್ ನಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಖಾಸಗಿ ನಿವಾಸದತ್ತ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿ 21 ವರ್ಷದ ವ್ಯಕ್ತಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಕೆಂಟಿಷ್ ನಗರದಲ್ಲಿರುವ ಸ್ಟಾರ್ಮರ್ ಅವರ ಖಾಸಗಿ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯು ಬೆಂಕಿ ದುರಂತಕ್ಕೆ ಕಾರಣವೆಂಬ ಮಾಹಿತಿ ದೊರಕಿದೆ. ದಾಳಿಯಲ್ಲಿ ಮನೆಯ ಪ್ರವೇಶ ದ್ವಾರಕ್ಕೆ ಹಾನಿಯಾಗಿತ್ತು. ಆದರೆ ಯಾರೂ ಗಾಯಗೊಂಡಿಲ್ಲ ಎಂದು ವರದಿ ಹೇಳಿದೆ.