×
Ad

AI ವಿನ್ಯಾಸಗೊಳಿಸಿದ ಪ್ರಥಮ ಲಸಿಕೆ ಸಂಶೋಧಿಸಿದ ಬ್ರಿಟನ್ ವಿಜ್ಞಾನಿಗಳು

Update: 2026-06-05 22:47 IST

ಸಾಂದರ್ಭಿಕ ಚಿತ್ರ | Photo Credit : magnific

ಲಂಡನ್: ಬ್ರಿಟನ್‍ನಲ್ಲಿ ಕ್ಯಾಂಬ್ರಿಡ್ಜ್ ವಿವಿ ಮತ್ತು ಸೌಥಾಂಪ್ಟನ್ ವಿವಿಯ ಸಂಶೋಧಕರ ನೇತೃತ್ವದ ವಿಜ್ಞಾನಿಗಳ ತಂಡವು ಪ್ರಥಮ ಬಾರಿಗೆ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ(AI)ಯಿಂದ ರೂಪಿಸಿದ ಲಸಿಕೆಯನ್ನು ಅಭಿವೃದ್ಧಿಗೊಳಿಸಿದ್ದಾರೆ.

ಮೊದಲ ಬಾರಿಗೆ ಲಸಿಕೆಯ ಪ್ರಮುಖ ಅಂಶವನ್ನು ಸಂಪೂರ್ಣವಾಗಿ ಎಐಯಿಂದ ವಿನ್ಯಾಸಗೊಳಿಸಿದ ಬಳಿಕ ಜನರ ಮೇಲೆ ಪ್ರಯೋಗಿಸಲಾಗಿದೆ. ಎಲ್ಲಾ ಕೋವಿಡ್ ರೂಪಾಂತರಗಳ ವಿರುದ್ಧ ಕೆಲಸ ಮಾಡಲು ಲಸಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಕೆಲಸವು ಇನ್ನೂ ಆರಂಭಿಕ ಹಂತದಲ್ಲಿದೆ, ಆದರೆ ತಂಡವು ಈಗಾಗಲೇ ಜ್ವರ ಮತ್ತು ಎಬೋಲಾವನ್ನು ನಿಭಾಯಿಸಲು ಪ್ರತ್ಯೇಕ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News