×
Ad

ಇಸ್ರೇಲ್ | ಜೈಲು ಭೇಟಿಗೆ ನಿಷೇಧ ರದ್ದುಗೊಳಿಸಿದ ಉನ್ನತ ನ್ಯಾಯಾಲಯ

Update: 2026-06-04 22:30 IST

Photo : gemini AI

ಜೆರುಸಲೇಂ, ಜೂ.4: ಅಂತರರಾಷ್ಟ್ರೀಯ ರೆಡ್‍ಕ್ರಾಸ್ ಸಮಿತಿ(ಐಸಿಆರ್‍ಸಿ) ಇಸ್ರೇಲ್‍ನ ಜೈಲಿನಲ್ಲಿರುವ ಫೆಲೆಸ್ತೀನಿಯನ್ ಕೈದಿಗಳನ್ನು ಭೇಟಿಯಾಗುವುದನ್ನು ತಡೆಯುವ ಇಸ್ರೇಲ್ ಸರಕಾರದ ಕ್ರಮವನ್ನು ಇಸ್ರೇಲ್‍ನ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

ಫೆಲೆಸ್ತೀನಿಯನ್ ಕೈದಿಗಳನ್ನು ಭೇಟಿಯ ನಿಷೇಧಕ್ಕೆ ಸರಕಾರ ಸೂಕ್ತ ಸಮರ್ಥನೆ ನೀಡಲು ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ ಈ ನಿಷೇಧ ಜಾರಿಗೊಳಿಸಲಾಗಿತ್ತು. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಐಸಿಆರ್‍ಸಿ `ಇಸ್ರೇಲ್‍ನಲ್ಲಿ ಬಂಧನದಲ್ಲಿರುವ ಕೈದಿಗಳನ್ನು ಭೇಟಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು' ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News