×
Ad

ಇರಾನ್‍ನ ನೂತನ ಸರ್ವೋಚ್ಛ ನಾಯಕ ಮೊಜ್ತಬಾರನ್ನು ಭೇಟಿಯಾಗುವುದು ನನ್ನ ಸೌಭಾಗ್ಯ: ಟ್ರಂಪ್

Update: 2026-06-05 22:44 IST

ಡೊನಾಲ್ಡ್ ಟ್ರಂಪ್ , ಮೊಜ್ತಬಾ ಖಾಮಿನೈ | Photo Credit : PTI 

ವಾಶಿಂಗ್ಟನ್: ಅಮೆರಿಕ-ಇರಾನ್ ನಡುವೆ ಒಪ್ಪಂದ ಏರ್ಪಟ್ಟರೆ ಇರಾನ್‍ನ ನೂತನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈಯನ್ನು ಭೇಟಿಯಾಗುವುದು ತನ್ನ ಸೌಭಾಗ್ಯವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ಅವರನ್ನು ಭೇಟಿಯಾಗಲು ನಾನು ಬಯಸುವುದಿಲ್ಲ. ಆದರೆ ಒಂದು ವೇಳೆ ಭೇಟಿಯಾದರೆ, ಅದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ನಾವು ಒಪ್ಪಂದವನ್ನು ಮಾಡಿಕೊಳ್ಳಬಹುದೇ ಎಂದು ಯೋಚಿಸುತ್ತಿದ್ದೇನೆ. ಒಂದು ವೇಳೆ ಒಪ್ಪಂದವಾದರೆ ನಾನು ಅವರನ್ನು ಭೇಟಿಯಾಗಬಹುದು" ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್‍ನ ಪಡೆಗಳು ಮೊಜ್ತಬಾರ ಕುಟುಂಬದ ಹಲವರನ್ನು ಗುರಿಯಾಗಿಸಿದರೂ ಅವರು ʼವೃತ್ತಿಪರ'. ನಾವು ಅವರ ತಂದೆ, ಪತ್ನಿ, ಮಗನನ್ನು ಕೊಂದೆವು. ಆದ್ದರಿಂದ ಬಹುಷಃ ನಾನು ಅವರ ನೆಚ್ಚಿನ ವ್ಯಕ್ತಿಯಲ್ಲ. ಆದರೆ ಕೆಲವು ವಲಯಗಳಲ್ಲಿ ಅವರು ಬಹಳ ಒಳ್ಳೆಯ ಖ್ಯಾತಿ, ಪ್ರಸಿದ್ಧಿಯನ್ನು ಹೊಂದಿದ್ದಾರೆ" ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ಇರಾನ್‍ನ ಬಳಿಯಿರುವ ಸಂವರ್ಧಿತ ಯುರೇನಿಯಂ ಅನ್ನು ತೆರವುಗೊಳಿಸಲು ಅಮೆರಿಕಕ್ಕೆ ಶಾಂತಿ ಒಪ್ಪಂದದ ಅಗತ್ಯವಿಲ್ಲ ಎಂದು ಇದೇ ಸಂದರ್ಭ ಟ್ರಂಪ್ ಪ್ರತಿಪಾದಿಸಿದ್ದಾರೆ. ಈ ಮಧ್ಯೆ, ದೇಶದ ಸರ್ವೋಚ್ಛ ನಾಯಕರು ಡೊನಾಲ್ಡ್ ಟ್ರಂಪ್‍ರನ್ನು ಭೇಟಿ ಮಾಡುವ ಕಲ್ಪನೆಯನ್ನು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಳ್ಳಿಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News