×
Ad

ಒಮಾನ್ ಸಮುದ್ರದಲ್ಲಿ ಅಮೆರಿಕದ ಮಿಲಿಟರಿ ನೌಕೆ ಮೇಲೆ ದಾಳಿ: ಇರಾನ್ ಪ್ರತಿಪಾದನೆ

ಒಮಾನ್ ಸಮುದ್ರದಲ್ಲಿ ಅಮೆರಿಕದ ಸೇನಾ ಹಡಗಿನ ಮೇಲೆ ದಾಳಿ: ಇರಾನ್ ಆರೋಪ

Update: 2026-06-04 22:23 IST

Photo credit: ndtv

ಟೆಹರಾನ್, ಜೂ.4: ಒಮಾನ್ ಸಮುದ್ರದಲ್ಲಿ `ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ'ವನ್ನು ಹೊಂದಿದ್ದ ಅಮೆರಿಕದ ಮಿಲಿಟರಿ ನೌಕೆಯನ್ನು ಗುರಿಯಾಗಿಸಿ ತನ್ನ ನೌಕಾಪಡೆ ದಾಳಿ ನಡೆಸಿರುವುದಾಗಿ ಇರಾನ್ ಪ್ರತಿಪಾದಿಸಿದ್ದು, ಇದನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ನಿರಾಕರಿಸಿದೆ.

ಹಡಗು ಒಮಾನ್ ಸಮುದ್ರದಲ್ಲಿ ಇರಾನ್‍ನ ಪ್ರಾದೇಶಿಕ ಜಲಪ್ರದೇಶವನ್ನು ಸಮೀಪಿಸುತ್ತಿದ್ದಾಗ ದಾಳಿ ನಡೆಸಲಾಗಿದೆ. ಇರಾನ್‍ನ ವಾಣಿಜ್ಯ ನೌಕೆಗಳ ಮೇಲೆ ಅಮೆರಿಕದ ದಾಳಿ ಹಾಗೂ ಹಾರ್ಮುಝ್‌ ಜಲಸಂಧಿಯ ನಿಯಮಗಳ ಉಲ್ಲಂಘನೆಯ ಬಳಿಕ ಈ ಘಟನೆ ನಡೆದಿರುವುದಾಗಿ ಇರಾನ್‍ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಇರಾನ್‍ನ ಹೇಳಿಕೆಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ಅಲ್ಲಗಳೆದಿದ್ದು ಸಮುದ್ರದಲ್ಲಿನ ಅಮೆರಿಕದ ಸ್ವತ್ತುಗಳು ಸುರಕ್ಷಿತವಾಗಿ ಮತ್ತು ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News