ನೇಪಾಳದಲ್ಲಿ ಬಸ್ಸು ಅಪಘಾತ: ಭಾರತದ 25 ಪ್ರವಾಸಿಗರಿಗೆ ಗಾಯ
Update: 2025-04-19 21:27 IST
ಸಾಂದರ್ಭಿಕ ಚಿತ್ರ
ಕಠ್ಮಂಡು: ನೇಪಾಳದ ಪೋಖರ ನಗರಕ್ಕೆ ಪ್ರಯಾಣಿಸುತ್ತಿದ್ದ ಬಸ್ಸು ಡಾಂಗ್ ಜಿಲ್ಲೆಯಲ್ಲಿ ಅಪಘಾತಕ್ಕೆ ಒಳಗಾಗಿದ್ದು ಕನಿಷ್ಠ 25 ಭಾರತೀಯ ಪ್ರವಾಸಿಗರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ಬಸ್ಸಿನ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಲಕ್ನೋ, ಸಿತಾಪುರ, ಹರ್ದೋಯಿ ಮತ್ತು ಬಾರಾಬಂಕಿ ಜಿಲ್ಲೆಯ ನಿವಾಸಿಗಳು. 19 ಗಾಯಾಳುಗಳನ್ನು ನೇಪಾಳದ ಗಡಿಭಾಗದಲ್ಲಿರುವ ಉತ್ತರಪ್ರದೇಶದ ತುಳಸೀಪುರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಉಳಿದವರನ್ನು ನೇಪಾಳದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.