ಕ್ಯಾಲಿಫೋರ್ನಿಯಾ: ದೋಣಿ ಮುಳುಗಿ 3 ಮಂದಿ ಮೃತ್ಯು
Update: 2025-05-06 22:25 IST
PC : NDTV
ನ್ಯೂಯಾರ್ಕ್: ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯೆಗೊ ಕಡಲತೀರದ ಬಳಿ ಸಣ್ಣ ದೋಣಿಯೊಂದು ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. 4 ಮಂದಿ ಗಾಯಗೊಂಡಿದ್ದು ಭಾರತದ ಇಬ್ಬರು ಮಕ್ಕಳ ಸಹಿತ 9 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ದೋಣಿಯಲ್ಲಿದ್ದವರು ವಲಸಿಗರು ಎಂದು ಶಂಕಿಸಲಾಗಿದೆ. ದುರಂತ ನಡೆದ ಸ್ಥಳದಲ್ಲಿ 17 ಲೈಫ್ ಜಾಕೆಟ್ ಪತ್ತೆಯಾಗಿದ್ದು ನಾಪತ್ತೆಯಾದವರಲ್ಲಿ ಇಬ್ಬರು ಭಾರತದ ಮಕ್ಕಳು. ಅವರ ಹೆತ್ತವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಪತ್ತೆಯಾದವರ ಶೋಧ ಕಾರ್ಯಕ್ಕೆ ಕರಾವಳಿ ರಕ್ಷಣಾ ಪಡೆಯ ಹಡಗುಗಳು ಹಾಗೂ ಹೆಲಿಕಾಪ್ಟರ್‍ಗಳ ನೆರವು ಪಡೆಯಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ಸಿಎನ್‍ಎನ್' ವರದಿ ಮಾಡಿದೆ.