ಕೆನಡಾ: ಹಿಂದೂಗಳನ್ನು ಭಾರತಕ್ಕೆ ಗಡೀಪಾರು ಮಾಡಲು ಖಾಲಿಸ್ತಾನಿಗಳ ಆಗ್ರಹ
Update: 2025-05-05 22:56 IST
Screengrab: X/@ShawnBinda
ಒಟ್ಟಾವ: ಕೆನಡಾದ ಟೊರಂಟೊ ಪ್ರಾಂತದ ಮಾಲ್ಟನ್ ಗುರುದ್ವಾರದಲ್ಲಿ ನಡೆದ ಹಿಂದೂ ವಿರೋಧಿ ರ್ಯಾಲಿಯಲ್ಲಿ ಹಿಂದೂ ಸಮುದಾಯದವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಆಗ್ರಹಿಸಲಾಗಿದೆ.
ಖಾಲಿಸ್ತಾನ್ ಪರ ಗುಂಪು ಆಯೋಜಿಸಿದ್ದ ಪ್ರತಿಭಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರತಿಭಟನಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಪ್ರತಿಕೃತಿಗಳನ್ನು ಪಂಜರದಲ್ಲಿಟ್ಟು ಮೆರವಣಿಗೆ ಮಾಡಲಾಗಿದೆ.
ಟೊರಂಟೋದ ಮಾಲ್ಟನ್ ಗುರುದ್ವಾರದಲ್ಲಿ ಖಾಲಿಸ್ತಾನ್ ಗ್ಯಾಂಗ್ ಕೆನಡಾದಲ್ಲಿರುವ ಸುಮಾರು 8 ಲಕ್ಷ ಹಿಂದೂಗಳನ್ನು `ಹಿಂದುಸ್ತಾನಕ್ಕೆ' ಗಡೀಪಾರು ಮಾಡಬೇಕೆಂದು ನಾಚಿಕೆಯಿಲ್ಲದೆ ಆಗ್ರಹಿಸಿದೆ. ಇದು ಭಾರತ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲ, ಖಾಲಿಸ್ತಾನಿ ಭಯೋತ್ಪಾದಕರ ಗುಂಪಿನಿಂದ ಲಜ್ಜೆಗೆಟ್ಟ ಹಿಂದು ವಿರೋಧಿ ದ್ವೇಷಕೃತ್ಯ' ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.