×
Ad

ಕೆನಡಾ: ಭಾರತೀಯ ಕಾನ್ಸುಲೇಟ್ ಎದುರು ಖಾಲಿಸ್ತಾನಿ ಪರ ಗುಂಪಿನ ಪ್ರತಿಭಟನೆ

Update: 2024-03-03 21:10 IST

Photo: hindustantimes.com

ಟೊರಂಟೊ: ಕೆನಡಾದ ಟೊರಂಟೊ ಮತ್ತು ವ್ಯಾಂಕೋವರ್ಗಳಲ್ಲಿ ಭಾರತೀಯ ಕಾನ್ಸುಲೇಟ್ ಎದುರು ಖಾಲಿಸ್ತಾನ್ ಪರ ಗುಂಪುಗಳು ಶನಿವಾರ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

ಸರ್ರೆಯಲ್ಲಿ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಖಾಲಿಸ್ತಾನ್ ಪರ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಅಡ್ಡಿಪಡಿಸಿದ ಮರುದಿನ ಈ ಪ್ರಕರಣ ನಡೆದಿದೆ.

ಕಳೆದ ವರ್ಷ ಜೂನ್ನಲ್ಲಿ ನಡೆದ ಖಾಲಿಸ್ತಾನಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ನ ಹತ್ಯೆಯನ್ನು ಖಂಡಿಸಿ ಕೆನಡಾದ ಪ್ರಮುಖ ನಗರಗಳಲ್ಲಿ `ಖಾಲಿಸ್ತಾನ್ ಕಾರ್ ರ‍್ಯಾಲಿ'ಯನ್ನು ಆಯೋಜಿಸಿರುವುದಾಗಿ ಎಸ್ಎಫ್ಜೆ ಹೇಳಿದೆ. ಆದರೆ ವಾರಾಂತ್ಯದ ದಿನವಾದ್ದರಿಂದ ಎರಡೂ ನಗರಗಳಲ್ಲಿನ ಭಾರತದ ಕಾನ್ಸುಲೇಟ್ ಕಚೇರಿಗಳು ಮುಚ್ಚಿದ್ದರಿಂದ ಪ್ರತಿಭಟನೆಯು ಹೆಚ್ಚಿನ ಪರಿಣಾಮ ಬೀರಲಿಲ್ಲ. ಅಲ್ಲದೆ ಎರಡೂ ನಗರಗಳಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರಿಂದ ಪ್ರತಿಭಟನಾಕಾರರಿಗೆ ಕಾನ್ಸುಲೇಟ್ ಕಚೇರಿಯ ಹತ್ತಿರ ಸುಳಿಯಲೂ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News