×
Ad

H-1B ವೀಸಾ ಅರ್ಜಿ ಶುಲ್ಕ ಹೆಚ್ಚಳ ಕ್ರಮಕ್ಕೆ ನ್ಯಾಯಾಲಯ ಸಮ್ಮತಿ

Update: 2025-12-24 22:20 IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್, ಡಿ.24: ಹೊಸ H-1B ವೀಸಾ ಅರ್ಜಿಗಳಿಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವುದನ್ನು ಟ್ರಂಪ್ ಆಡಳಿತ ಮುಂದುವರಿಸಬಹುದು ಎಂದು ಫೆಡರಲ್ ನ್ಯಾಯಾಧೀಶರು ಮಂಗಳವಾರ ಹೇಳಿದ್ದಾರೆ.

ಜನಪ್ರಿಯ H-1B ವೀಸಾ ಅರ್ಜಿ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಅಮೆರಿಕಾದ ಚೇಂಬರ್ ಆಫ್ ಕಾಮರ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಶುಲ್ಕ ಹೆಚ್ಚಳಕ್ಕೆ ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ವಾದಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಲಯ `ಸಂಸತ್ತು ಅಧ್ಯಕ್ಷರಿಗೆ ವ್ಯಾಪಕ ಶಾಸನಬದ್ಧ ಅಧಿಕಾರ ನೀಡಿದೆ. ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯವೆಂದು ಅಧ್ಯಕ್ಷರು ಗ್ರಹಿಸುವ ಸಮಸ್ಯೆಯನ್ನು ಸೂಕ್ತವೆಂದು ತೋರುವ ರೀತಿಯಲ್ಲಿ ಅವರು ಪರಿಹರಿಸಬಹುದು' ಎಂದು ತೀರ್ಪು ನೀಡಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅರ್ಜಿದಾರರು ಹೇಳಿದ್ದಾರೆ.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News