×
Ad

ಚಿಲಿ-ಅರ್ಜೆಂಟಿನಾ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

Update: 2025-05-02 19:51 IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್:‌ ಚಿಲಿ ಮತ್ತು ಅರ್ಜೆಂಟೀನಾದ ದಕ್ಷಿಣ ಕರಾವಳಿಯಲ್ಲಿ ಶುಕ್ರವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಕೇಪ್ ಹಾರ್ನ್ ಮತ್ತು ಅಂಟಾರ್ಕ್ಟಿಕಾ ನಡುವೆ 10 ಕಿಮೀ (6 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ.

ತೀವ್ರ ಪ್ರಮಾಣದ ಭೂಕಂಪನದಿಂದಾಗಿ ಸುನಾಮಿಯ ಭೀತಿ ಎದುರಾಗಿದ್ದು, ಮ್ಯಾಗಲ್ಲೇನ್ಸ್ ಕರಾವಳಿ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸಬೇಕೆಂದು ಚಿಲಿಯ ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಸೇವೆ ತಿಳಿಸಿದೆ.

ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರು ಮ್ಯಾಗಲ್ಲೇನ್ಸ್ ಕರಾವಳಿ ಪ್ರದೇಶದಿಂದ ಸ್ಥಳಾಂತರವಾಗುವಂತೆ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.

ಮ್ಯಾಗಲ್ಲೇನ್ಸ್‌ ಮಾತ್ರವಲ್ಲದೆ ಸಮೀಪದ ಅಂಟಾರ್ಕ್ಟಿಕ್ ಪ್ರದೇಶಗಳಲ್ಲಿಯೂ ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News