×
Ad

ಚೀನಾ: ಕಲ್ಲಿದ್ದಲ ಗಣಿಯಲ್ಲಿ ಅಗ್ನಿದುರಂತ; 16 ಮಂದಿ ಮೃತ್ಯು

Update: 2023-09-25 22:30 IST

Photo: twitter/ndtv

ಬೀಜಿಂಗ್ : ದಕ್ಷಿಣ ಚೀನಾದ ಗೈಝವ್ ಪ್ರಾಂತದಲ್ಲಿನ ಪಾಂಝ್‍ಹು ನಗರದಲ್ಲಿನ ಸರಕಾರಿ ಸ್ವಾಮ್ಯದ ಕಲ್ಲಿದ್ದಲ ಗಣಿಯಲ್ಲಿ ರವಿವಾರ ಸಂಭವಿಸಿದ ಅಗ್ನಿದುರಂತದಲ್ಲಿ ಕನಿಷ್ಟ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಶಾಂಜಿಯಾಷು ಕಲ್ಲಿದ್ದಲ ಗಣಿಯಲ್ಲಿ ರವಿವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಟ 16 ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ. ಬೆಂಕಿಯನ್ನು ಈಗ ನಿಯಂತ್ರಿಸಲಾಗಿದ್ದು ಗಣಿಯಲ್ಲಿನ ಕನ್ವೆಯರ್ ಬೆಲ್ಟ್ ಗೆ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ. ದುರಂತದ ಬಳಿಕ ನಗರದಲ್ಲಿ ಕಾರ್ಯಾಚರಿಸುವ ಎಲ್ಲಾ ಗಣಿಗಳ ಕಾರ್ಯಾಚರಣೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪಾಂಝ್‍ಹು ನಗರಾಡಳಿತ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News