ಸಾಂದರ್ಭಿಕ ಚಿತ್ರ

ಮಾಸ್ಕೊ, ನ. 1: ದೇಶದ ಪೂರ್ವ ಭಾಗದಲ್ಲಿರುವ ಕಸ್ತೊವೊ ಜಿಲ್ಲೆಯ ಕೈಗಾರಿಕಾ ಉದ್ಯಮದ ಮೇಲೆ ಶನಿವಾರ ರಾತ್ರಿಯಿಡೀ ‘ಬೃಹತ್ ಡ್ರೋನ್ ದಾಳಿ’ ನಡೆದಿದ್ದು, ಕೈಗಾರಿಕಾ ಉದ್ಯಮವೊಂದಕ್ಕೆ ತೀವ್ರ ಹಾನಿಯಾಗಿದೆ ಎಂದು ರಶ್ಯ ರವಿವಾರ ತಿಳಿಸಿದೆ. ಇದಕ್ಕೂ ಮುನ್ನ, ರಶ್ಯದ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ ಹೇಳಿಕೊಂಡಿತ್ತು.

ಉಕ್ರೇನ್ ಮತ್ತೆ ರಶ್ಯದ ಕಾರ್ಖಾನೆಗಳ ಮೇಲೆ ದಾಳಿಯನ್ನು ಆರಂಭಿಸಿದ್ದು, ಮೂರು ತೈಲ ಸಂಸ್ಕರಣಾಗಾರಗಳು ಹಾಗೂ ಒಂದು ಗ್ಯಾಸ್-ಕೆಮಿಕಲ್ ಕಾಂಪ್ಲೆಕ್ಸ್ ಮೇಲೆ ದಾಳಿ ಮಾಡಿದೆ. 100ಕ್ಕೂ ಹೆಚ್ಚು ಡ್ರೋನ್ಗಳನ್ನು ನಾಶಪಡಿಸಲಾಗಿದೆ ಮತ್ತು ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹಿರಿಯ ಅಧಿಕಾರಿ ಅಲೆಕ್ಸಾಂಡರ್ ನೊವಾಕ್ ತಿಳಿಸಿದ್ದಾರೆ.

ಇಂಧನ ಮತ್ತು ಲೂಬ್ರಿಕೆಂಟ್ಗಳನ್ನು ಉತ್ಪಾದಿಸುವ ರಶ್ಯದ ಅತಿದೊಡ್ಡ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾಗಿರುವ ಕೊಸ್ತೊವೊ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ ಎಂದು ಉಕ್ರೇನ್ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor