ಸೊಮಾಲಿಯದ ಕಡಲ್ಗಳ್ಳರಿಂದ ಇರಾನಿನ ಮೀನುಗಾರಿಕಾ ದೋಣಿ ವಶ
Photo Credit : X
ಮೊಗಾದಿಶು, ನ. 1: ಸೊಮಾಲಿಯಾದ ಕಡಲ್ಗಳ್ಳರು 23 ಜನರಿದ್ದ ಇರಾನ್ ನ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದ್ದು, ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಬೆಂಬಲ ನೀಡಲು ಕಡಲ್ಗಳ್ಳರು ಈ ದೋಣಿಯನ್ನು ಬಳಸಿಕೊಳ್ಳಬಹುದು ಎಂದು ಹಿಂದೂ ಮಹಾಸಾಗರ ಕಡಲ ಭದ್ರತಾ ಕೇಂದ್ರ ತಿಳಿಸಿದೆ.
ಅಜಿನಿ ಎಂಬ ಹೆಸರಿನ ಈ ದೋಣಿಯನ್ನು ಈಶಾನ್ಯ ಸೊಮಾಲಿಯಾದ ಬಂದರ್ ಬೈಲಾ ಮತ್ತು ಹಾಫುನ್ ಕರಾವಳಿ ನಗರಗಳ ನಡುವೆ ಅಪಹರಿಸಲಾಗಿದೆ. 21 ಇರಾನಿ ಸಿಬ್ಬಂದಿ ಮತ್ತು ಇಬ್ಬರು ಸೊಮಾಲಿಯಾ ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದ್ದ ಈ ದೋಣಿಯನ್ನು 12 ಜನ ಕಡಲ್ಗಳ್ಳರು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಯ ಸುರಕ್ಷತೆಯ ಕುರಿತು ಮಾಹಿತಿ ಲಭ್ಯವಿಲ್ಲ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.