ಕೆನಡಾದಲ್ಲಿ ಚುನಾವಣೆ; ನಾಳೆ ಫಲಿತಾಂಶದ ನಿರೀಕ್ಷೆ
Update: 2025-04-28 21:46 IST
PC : NDTV
ಒಟ್ಟಾವ: ಕೆನಡಾದಲ್ಲಿ ಫೆಡರಲ್ ಚುನಾವಣೆಗೆ ಮತದಾನ ಸೋಮವಾರ ನಡೆದಿದ್ದು ಮಂಗಳವಾರ ಬೆಳಿಗ್ಗೆ ಪ್ರಥಮ ಫಲಿತಾಂಶ ಹೊರ ಬೀಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಿಬರಲ್ ಪಕ್ಷದ ನಾಯಕ, ಹಾಲಿ ಪ್ರಧಾನಿ ಮಾರ್ಕ್ ಕಾರ್ನೆ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯರೆ ಪೊಲಿವ್ರೆ ನಡುವೆ ತೀವ್ರ ಪೈಪೋಟಿ ಇರುವುದಾಗಿ ಚುನಾವಣಾ ಪೂರ್ವ ಸಮೀಕ್ಷೆಗಳು ವರದಿ ಮಾಡಿದ್ದವು.