ರಶ್ಯದ ಗ್ಯಾಸ್ ಕಾಂಪ್ಲೆಕ್ಸ್ ನಲ್ಲಿ ಸ್ಫೋಟ: 7 ಮಂದಿ ಬಲಿ
Photo Credit: ndtv
ಮಾಸ್ಕೊ, ಆ. 26: ರಶ್ಯದ ಪೂರ್ವ ಪ್ರಾಂತದ ಅಮುರ್ ಪ್ರದೇಶದಲ್ಲಿರುವ ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ಭಾರಿ ಬೆಂಕಿ ಮತ್ತು ಸ್ಫೋಟ ಸಂಭವಿಸಿದ್ದು, ಆರು ಮಂದಿ ಚೀನಾ ಪ್ರಜೆಗಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಜನರು ಕಾಣೆಯಾಗಿದ್ದಾರೆ. 152 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಮುರ್ ಕಾಂಪ್ಲೆಕ್ಸ್ ಎಂಬುದು ರಶ್ಯದ ಪೆಟ್ರೋಕೆಮಿಕಲ್ ಕಂಪನಿ ‘ಸಿಬೂರ್’ ಮತ್ತು ಚೀನಾದ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ದೈತ್ಯ ಸಂಸ್ಥೆ ‘ಸಿನೋಪೆಕ್’ನ ಜಂಟಿ ಉದ್ಯಮವಾಗಿದೆ. ಈ ಪ್ಲಾಂಟ್ ಶೀಘ್ರದಲ್ಲೇ ಉದ್ಘಾಟನೆಯಾಗಬೇಕಿತ್ತು ಮತ್ತು ಪ್ರಸ್ತುತ ಆರಂಭಿಕ ಹಂತದ ಪರಿಶೀಲನೆ ಕೆಲಸಗಳು ನಡೆಯುತ್ತಿದ್ದವು ಎಂದು ವರದಿ ತಿಳಿಸಿದೆ.