ಸಾಂದರ್ಭಿಕ ಚಿತ್ರ | Photo Credit : magnific. com

ವಾಷಿಂಗ್ಟನ್, ಆ. 26: ಡೊನಾಲ್ಡ್ ಟ್ರಂಪ್ ಆಡಳಿತವು ಸರ್ಕಾರದ ನೆರವು ಅಥವಾ ಸೌಲಭ್ಯಗಳ ಮೇಲೆ ಅವಲಂಬಿತರಾಗಬಹುದಾದ ಅರ್ಜಿದಾರರ ಪರಿಶೀಲನೆಯನ್ನು ಚುರುಕುಗೊಳಿಸಿರುವುದರಿಂದ, ವಿಶ್ವದಾದ್ಯಂತ ಇರುವ ತನ್ನ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಗಳಲ್ಲಿ ವಲಸೆ ವೀಸಾ ಸಂದರ್ಶನಗಳ ‘ಅಪಾಯಿಂಟ್ಮೆಂಟ್ಗಳನ್ನು’ ತಾತ್ಕಾಲಿಕವಾಗಿ ತಡೆಹಿಡಿದಿದೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿದೆ.

ಈಗಾಗಲೇ ಸಂದರ್ಶನಕ್ಕೆ ದಿನಾಂಕ ಕಾಯ್ದಿರಿಸಿದ್ದ ಅರ್ಜಿದಾರರಿಗೆ ಅವರ ಅಪಾಯಿಂಟ್ಮೆಂಟ್ಗಳನ್ನು ಮುಂದೂಡಲಾಗಿದೆ ಮತ್ತು ಹೊಸ ದಿನಾಂಕಗಳನ್ನು ನಂತರ ತಿಳಿಸಲಾಗುವುದು ಎಂಬ ಇ-ಮೇಲ್ಗಳನ್ನು ಕಳುಹಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.

ಅಮೆರಿಕದ ವಲಸೆ ಕಾಯ್ದೆಯಡಿಯಲ್ಲಿರುವ ‘ಪಬ್ಲಿಕ್ ಚಾರ್ಜ್’ ನಿಯಮದ ಮೇಲೆ ವಿಶೇಷ ಗಮನಹರಿಸಿ, ವೀಸಾ ಅರ್ಜಿದಾರರನ್ನು ಮತ್ತಷ್ಟು ಕೂಲಂಕಷವಾಗಿ ಮತ್ತು ನಿಖರವಾಗಿ ಮೌಲ್ಯಮಾಪನ ಮಾಡಲು ಕಾನ್ಸುಲರ್ ಅಧಿಕಾರಿಗಳಿಗೆ ಪ್ರಾರಂಭಿಸಿರುವ ಜಾಗತಿಕ ತರಬೇತಿ ಕಾರ್ಯಕ್ರಮದ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳುತ್ತಿದೆ. ‘ಪಬ್ಲಿಕ್ ಚಾರ್ಜ್’ ಎಂದರೆ ಸರ್ಕಾರದ ಹಣಕಾಸಿನ ನೆರವಿನ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗುವ ಸಾಧ್ಯತೆಯಿರುವ ವಲಸಿಗ ಎಂದು ಅರ್ಥೈಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor