Photo Credit: timesofindia

ಹೊಸದಿಲ್ಲಿ, ಆ. 26: ನೇಪಾಳ ಗಡಿಗೆ ತಾಗಿಕೊಂಡಿರುವ ಟಿಬೆಟ್ ನ ಗಿರೋಂಗ್ ಪಟ್ಟಣದಲ್ಲಿ ಬುಧವಾರ ದಿಢೀರ್ ಪ್ರವಾಹ ಸಂಭವಿಸಿದ ಸಂದರ್ಭ, ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಪ್ರತಿಷ್ಠಾನದ ಕನಿಷ್ಠ 77 ಯಾತ್ರಿಕರು ಹಾಗೂ ಮೂವರು ಸ್ವಯಂಸೇವಕರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ಕೈಲಾಸ ಯಾತ್ರೆಯಿಂದ ವಾಪಸಾಗಿದ್ದ ಈ ತಂಡವು ಗಿರೋಂಗ್ ಪಟ್ಟಣದ ವಲಸೆ ಕೇಂದ್ರದಲ್ಲಿದ್ದಾಗ ದಿಢೀರ್ ಪ್ರವಾಹ ಸಂಭವಿಸಿದೆ. ವಲಸೆ ಕೇಂದ್ರದ ಕಟ್ಟಡ ಸೇರಿದಂತೆ ಗಿರೋಂಗ್ ನಗರದ ಬಹುತೇಕ ಭಾಗಗಳು ನೆರೆನೀರಿನಲ್ಲಿ ಮುಳುಗಿವೆ. ಈ ಬಗ್ಗೆ ಪೋಸ್ಟ್ ಮಾಡಿರುವ ಸದ್ಗುರು ಅವರು ನಾಪತ್ತೆಯಾದ ಯಾತ್ರಿಕರ ಯಾವುದೇ ವಿವರಗಳು ಲಭ್ಯವಾಗಿಲ್ಲವೆಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor