ಸ್ಪೇನ್ ನಲ್ಲಿ ಉಕ್ರೇನ್ ಮಾಜಿ ಅಧ್ಯಕ್ಷರ ಆಪ್ತ ಸಹಾಯಕನ ಗುಂಡಿಕ್ಕಿ ಹತ್ಯೆ
Update: 2025-05-22 22:28 IST
PC | Paul White/AP
ಮ್ಯಾಡ್ರಿಡ್: ಉಕ್ರೇನ್ ನ ಮಾಜಿ ಅಧ್ಯಕ್ಷ ವಿಕ್ಟರ್ ಯನುಕೊವಿಚ್ ಅವರ ಆಪ್ತ ಸಹಾಯಕನಾಗಿದ್ದ ನಿವೃತ್ತ ರಾಜಕಾರಣಿ ಆಂಡ್ರಿಯ್ ಪೊರ್ಟೊನೊವ್‍ರನ್ನು ಬುಧವಾರ ಸ್ಪೇನ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಸ್ಪೇನ್ ರಾಜಧಾನಿ ಮ್ಯಾಡ್ರಿಡ್‍ನ ಹೊರವಲಯದ ಪೊಝುವೆಲೊ ನಗರದಲ್ಲಿನ ಅಮೆರಿಕನ್ ಶಾಲೆಗೆ ತನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದು ಪೊರ್ಟೊನೋವ್ ಶಾಲೆಯ ಗೇಟ್ ನ ಹೊರಗೆ ನಿಂತಿದ್ದಾಗ ಗುಂಡಿನ ದಾಳಿ ನಡೆದಿದ್ದು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಉಕ್ರೇನ್ ಅಧ್ಯಕ್ಷರಾಗಿದ್ದ ವಿಕ್ಟರ್ ಯನುಕೊವಿಚ್ ರನ್ನು 2014ರಲ್ಲಿ ಉಚ್ಛಾಟಿಸಲಾಗಿತ್ತು.