×
Ad

ಗಾಝಾ ಶಾಲೆಯ ಮೇಲೆ ಇಸ್ರೇಲ್ ದಾಳಿ; ಇಬ್ಬರು ಮಕ್ಕಳ ಸಹಿತ 4 ಮಂದಿ ಮೃತ್ಯು

Update: 2024-04-18 23:19 IST

ಸಾಂದರ್ಭಿಕ ಚಿತ್ರ | PC : PTI

ಗಾಝಾ: ಗಾಝಾ ನಗರದಲ್ಲಿ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ 4 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಗಾಝಾ ನಗರದ ಪಶ್ಚಿಮದಲ್ಲಿರುವ ಶತಿ ನಿರಾಶ್ರಿತರ ಶಿಬಿರದ ಬಳಿಯ ಶುಹಾದಾ ಶಾಲೆಯ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ಈ ಶಾಲೆಯಲ್ಲಿ ಉತ್ತರ ಮತ್ತು ಪೂರ್ವ ಗಾಝಾಪಟ್ಟಿಯ ಸಾವಿರಾರು ಫೆಲೆಸ್ತೀನಿಯನ್ ನಿರಾಶ್ರಿತರು ಆಶ್ರಯ ಪಡೆದಿದ್ದರು. ಮಧ್ಯ ಗಾಝಾದ ನುಸೀರತ್ ಶಿಬಿರದ ಬಳಿ ಸತತ ಎಂಟನೇ ದಿನ ಇಸ್ರೇಲ್‍ನ ಬಾಂಬ್ ದಾಳಿ ಮುಂದುವರಿದಿದೆ ಎಂದು ಸ್ಥಳೀಯರು ಗುರುವಾರ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News