×
Ad

ಪಶ್ಚಿಮ ದಂಡೆ: ಇಸ್ರೇಲ್ ದಾಳಿಯಲ್ಲಿ ಇಬ್ಬರ ಸಾವು

Update: 2025-12-08 00:19 IST

Photo Credit : aljazeera.com

ರಮಲ್ಲಾ: ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಯೋಧರತ್ತ ಕಾರನ್ನು ಅಪಾಯಕಾರಿಯಾಗಿ ನುಗ್ಗಿಸಿದ ಫೆಲೆಸ್ತೀನಿಯನ್ ಯುವಕನನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆಗೈದಿದೆ. ಈ ಘಟನೆಯಲ್ಲಿ ರಸ್ತೆಯ ಪಕ್ಕ ನಿಲ್ಲಿಸಿದ್ದ ಮತ್ತೊಬ್ಬ ಫೆಲೆಸ್ತೀನಿಯನ್ ವ್ಯಕ್ತಿಯೂ ಸಾವನ್ನಪ್ಪಿರುವುದಾಗಿ ಇಸ್ರೇಲ್ ನ ಭದ್ರತಾ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಪಶ್ಚಿಮದಂಡೆಯ ಹೆಬ್ರಾನ್ ನಗರದಲ್ಲಿನ ಚೆಕ್ಪಾಯಿಂಟ್ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿಕೆ ತಿಳಿಸಿದೆ. ರಸ್ತೆ ಸ್ವಚ್ಛ ಮಾಡುತ್ತಿದ್ದ ನಗರಪಾಲಿಕೆಯ ಪೌರ ಕಾರ್ಮಿಕ 55 ವರ್ಷದ ನಯಿಮ್ ಅಬು ದಾವೂದ್ ಹಾಗೂ ಮತ್ತೊಬ್ಬ ಯುವಕ ಮೃತಪಟ್ಟಿರುವುದಾಗಿ ಫೆಲೆಸ್ತೀನ್ ನ ಸರಕಾರಿ ಸ್ವಾಮ್ಯದ ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News