×
Ad

ಯುರೋಪಿಯನ್ ಯೂನಿಯನ್ ರದ್ದುಗೊಳಿಸಬೇಕು: ಎಲಾನ್ ಮಸ್ಕ್ ಆಗ್ರಹ

Update: 2025-12-08 22:18 IST

ಎಲಾನ್ ಮಸ್ಕ್ | Photo Credit : PTI 

ವಾಷಿಂಗ್ಟನ್, ಡಿ.8: ಯುರೋಪಿಯನ್ ಯೂನಿಯನ್ ಅನ್ನು ರದ್ದುಗೊಳಿಸಿ ಸಾರ್ವಭೌಮತ್ವವನ್ನು ಪ್ರತ್ಯೇಕ ದೇಶಗಳಿಗೆ ಹಿಂದಿರುಗಿಸಬೇಕು. ಇದು ಸರಕಾರಕ್ಕೆ ತನ್ನ ಜನರನ್ನು ಉತ್ತಮವಾಗಿ ಪ್ರತಿನಿಧಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಆಗ್ರಹಿಸಿದ್ದಾರೆ.

ಯುರೋಪಿಯನ್ ಯೂನಿಯನ್(EU)ನ ಡಿಜಿಟಲ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತನ್ನ ಸಾಮಾಜಿಕ ವೇದಿಕೆ `ಎಕ್ಸ್' ಮೇಲೆ 14 ಕೋಟಿ ಡಾಲರ್ ದಂಡ ವಿಧಿಸಿರುವುದಕ್ಕೆ ಅಸಮಾಧಾನ ಸೂಚಿಸಿದ ಮಸ್ಕ್, EU ನಿಷೇಧಿಸಬೇಕೆಂದು ಗಂಭೀರವಾಗಿ ಹೇಳುತ್ತಿದ್ದೇನೆ, ತಮಾಷೆ ಮಾಡುತ್ತಿಲ್ಲ ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News