ಗಾಝಾಕ್ಕೆ ನೆರವು ಸಾಗಿಸುವ ಜಿಎಸ್‍ಎಫ್ ನೌಕೆಯ ಮೇಲೆ ಡ್ರೋನ್ ದಾಳಿ : ವರದಿ
Update: 2025-09-24 19:57 IST
PC : X \ @Husein080
ಅಥೆನ್ಸ್, ಸೆ.24: ಗಾಝಾಕ್ಕೆ ನೆರವು ಸಾಗಿಸುತ್ತಿದ್ದ ಫೆಲೆಸ್ತೀನ್‌ನ ಪರ ಕಾರ್ಯಕರ್ತರಿದ್ದ ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ನೌಕೆಗಳನ್ನು ಗುರಿಯಾಗಿಸಿ ಹಲವು ಡ್ರೋನ್‍ಗಳನ್ನು ಪ್ರಯೋಗಿಸಲಾಗಿದ್ದು ಸಂವಹನ ವ್ಯವಸ್ಥೆಗೆ ಹಾನಿಯಾಗಿದೆ. ನೌಕೆಗಳ ಸಮೀಪ ಹಲವು ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ಜಿಎಸ್‍ಎಫ್ ಮೂಲಗಳು ಹೇಳಿವೆ.
ಸುಮಾರು 16 ಡ್ರೋನ್‍ಗಳು ನೌಕೆಗಳ ಮೇಲೆ ಸ್ಫೋಟಕಗಳನ್ನು ಎಸೆದಿದ್ದು ಕೆಲವು ನೌಕೆಗಳ ಸಂವಹನ ವ್ಯವಸ್ಥೆ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. `ಈ ಮಾನಸಿಕ ಕಾರ್ಯಾಚರಣೆಗೆ ನಾವು ಸಾಕ್ಷಿಯಾಗಿದ್ದೇವೆ, ಆದರೆ ಭಯಭೀತರಾಗುವುದಿಲ್ಲ. ಐದು ನೌಕೆಗಳ ಮೇಲೆ ದಾಳಿಯಾಗಿದೆ. ನಾವು ಮಾನವೀಯ ನೆರವಿನ ಸಾಮಾಗ್ರಿಗಳನ್ನು ಮಾತ್ರ ಒಯ್ಯುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಆಯುಧಗಳಿಲ್ಲ ಅಥವಾ ಯಾರಿಗೂ ಬೆದರಿಕೆ ಒಡ್ಡುವುದಿಲ್ಲ' ಎಂದು ಜಿಎಸ್‍ಎಫ್ ಸದಸ್ಯೆ, ಜರ್ಮನಿಯ ಮಾನವ ಹಕ್ಕುಗಳ ಕಾರ್ಯಕರ್ತೆ ಯಾಸ್ಮೀನ್ ಅಸರ್ ಹೇಳಿದ್ದಾರೆ.