×
Ad

ಕದನ ವಿರಾಮ | ಚೆಂಡು ಈಗ ಇಸ್ರೇಲ್ ಅಂಗಣದಲ್ಲಿದೆ: ಹಮಾಸ್

Update: 2024-05-10 21:38 IST

PC : NDTV

ಗಾಝಾ: ಈಜಿಪ್ಟ್ನ ಕೈರೋದಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಯಲ್ಲಿ ತನ್ನ ನಿಯೋಗ ಪಾಲ್ಗೊಂಡು ನಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ಚೆಂಡು ಈಗ ಸಂಪೂರ್ಣವಾಗಿ ಇಸ್ರೇಲ್ನ ಅಂಗಣದಲ್ಲಿದೆ ಎಂದು ಹಮಾಸ್ ಹೇಳಿದೆ.

ಆಕ್ರಮಣಕಾರರು(ಇಸ್ರೇಲ್) ಮಧ್ಯಸ್ಥಿಕೆದಾರರು ಮುಂದಿರಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ ಮತ್ತು ಕೆಲವು ಪ್ರಮುಖ ವಿಷಯಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಆದ್ದರಿಂದ ಚೆಂಡು ಈಗ ಅವರ ಅಂಗಣದಲ್ಲಿದೆ. ಮಧ್ಯಸ್ಥಿಕೆದಾರರು ಮುಂದಿರಿಸಿದ ಪ್ರಸ್ತಾವನೆಗೆ ನಮ್ಮ ಸಮ್ಮತಿಯಿದೆ' ಎಂದು ಹಮಾಸ್ ಮೂಲಗಳು ಹೇಳಿವೆ. ಈಜಿಪ್ಟ್ನ ಕೈರೋದಲ್ಲಿ ಖತರ್, ಈಜಿಪ್ಟ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಎರಡೂ ಕಡೆಯವರ ನಿಲುವನ್ನು ಹತ್ತಿರಕ್ಕೆ ತರುವ ಪ್ರಯತ್ನ ಮುಂದುವರಿದಿದೆ ಎಂದು ಈಜಿಪ್ಟ್ನ `ಅಲ್-ಕಹೇರಾ' ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News