×
Ad

ಕ್ಯಾಲಿಫೋರ್ನಿಯಾ: ದೇವಸ್ಥಾನದಲ್ಲಿ ಭಾರತ-ವಿರೋಧಿ ಬರಹ ಪತ್ತೆ

Update: 2024-01-05 23:51 IST

Photo: X/@HinduAmerican

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿ `ಶೇರಾವಾಲಿ ಮಾ' ದೇವಸ್ಥಾನವನ್ನು ಭಾರತ-ವಿರೋಧಿ, ಖಾಲಿಸ್ತಾನ್ ಪರ ಬರಹದ ಮೂಲಕ ವಿರೂಪಗೊಳಿಸಲಾಗಿದೆ ಎಂದು ಹಿಂದು-ಅಮೆರಿಕನ್ ಫೌಂಡೇಷನ್(ಎಚ್ಎಎಫ್) ಹೇಳಿದೆ.

ಮತ್ತೊಂದು ಹಿಂದು ದೇವಸ್ಥಾನವನ್ನು ಖಾಲಿಸ್ತಾನ್ ಪರ ಘೋಷಣೆಯೊಂದಿಗೆ ವಿರೂಪಗೊಳಿಸಲಾಗಿದೆ. ಕಳೆದ ವಾರ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಇದೇ ರೀತಿಯ ಕೃತ್ಯ ನಡೆದಿತ್ತು ಮತ್ತು ಇದೇ ಪ್ರದೇಶದಲ್ಲಿರುವ ಶಿವದುರ್ಗ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದರು. ದೇವಸ್ಥಾನದ ಆಡಳಿತ ಮತ್ತು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ' ಎಂದು ಎಚ್ಎಎಫ್ ಟ್ವೀಟ್(ಎಕ್ಸ್) ಮಾಡಿದೆ. ನೆವಾರ್ಕ್ ಪೊಲೀಸ್ ಇಲಾಖೆ ಪ್ರಕರಣದ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಈ `ಉದ್ದೇಶಿತ ಕೃತ್ಯ'ದ ತನಿಖೆ ನಡೆಸಲಾಗುತ್ತಿದೆ. ಕಳೆದ ವಾರ ಇದೇ ಪ್ರದೇಶದ ಮತ್ತೊಂದು ದೇವಸ್ಥಾನದಲ್ಲೂ ಇಂತಹ ಕೃತ್ಯ ನಡೆದಿದ್ದು ಎರಡೂ ದೇವಸ್ಥಾನಗಳ ಬಳಿಯಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದು. ನೆವಾರ್ಕ್ನಲ್ಲಿ ಇಂತಹ ಉದ್ದೇಶಿತ ಕೃತ್ಯಗಳನ್ನು ಸಹಿಸಲಾಗದು' ಎಂದು ನೆವಾರ್ಕ್ ಪೊಲೀಸ್ ಇಲಾಖೆಯ ವಕ್ತಾರ ಜೊನಾಥನ್ ಆರ್ಗೆಲೊ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಹಿಂದು ದೇವಸ್ಥಾನಗಳನ್ನು ವಿರೂಪಗೊಳಿಸುವ ಕೃತ್ಯಗಳನ್ನು ಖಂಡಿಸುತ್ತಿದ್ದು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ನಿರ್ದೇಶಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News