×
Ad

ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆಯ ಹತ್ಯೆ: ಕಸದ ತೊಟ್ಟಿಯಲ್ಲಿ ಪತ್ತೆಯಾದ ಮೃತದೇಹ

Update: 2024-03-11 13:02 IST

ಚೈತನ್ಯ ಮದಗನಿ (Photo:X@SADigestOnline)

ಹೊಸದಿಲ್ಲಿ: ಹೈದರಾಬಾದ್‌ ಮೂಲದ 36 ವರ್ಷದ ಮಹಿಳೆಯೊಬ್ಬರ ಮೃತದೇಹ ಆಸ್ಟ್ರೇಲಿಯಾದ ಬಕ್ಲಿ ಎಂಬಲ್ಲಿ ರಸ್ತೆ ಬದಿಯ ಗಾಲಿಚಕ್ರದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಚೈತನ್ಯ ಮದಗನಿ ಎಂದು ಗುರುತಿಸಲಾಗಿದ್ದು. ಆಕೆಯನ್ನು ಹತ್ಯೆಗೈದಿದ್ದಾನೆಂದು ತಿಳಿಯಲಾದ ಆಕೆಯ ಗಂಡ ಅಶೋಕ್‌ ರಾಜ್‌ ವರಿಕುಪ್ಪಲ ತನ್ನ ಪುತ್ರನೊಂದಿಗೆ ಹೈದರಾಬಾದ್‌ಗೆ ವಾಪಸಾಗಿ ಆತನನ್ನು ತನ್ನ ಅತ್ತೆಮಾವಂದಿರ ವಶಕ್ಕೆ ಒಪ್ಪಿಸಿದ್ದಾನೆ ಎಂದು ವರದಿಯಾಗಿದೆ.

ಚೈತನ್ಯ ಮತ್ತು ಅಶೋಕ್‌ ಆಸ್ಟ್ರೇಲಿಯಾದ ಪೌರತ್ವ ಪಡೆದ ನಂತರ ಅಲ್ಲಿನ ಪಾಯಿಂಟ್‌ ಕುಕ್‌ ಎಂಬಲ್ಲಿ ವಾಸವಾಗಿದ್ದರು. ಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಚೈತನ್ಯಳ ಹೆತ್ತವರ ಮನೆಯಿರುವ ಕ್ಷೇತ್ರವಾದ ಉಪ್ಪಲ್‌ ಶಾಸಕ ಬಂಡಾರಿ ಲಕ್ಷ್ಮ ರೆಡ್ಡಿ ಹೆತ್ತವರನ್ನು ಕಂಡು ಮಾತನಾಡಿದ್ದಾರೆ ಹಾಗೂ ಅವರ ವಿನಂತಿಯಂತೆ ಚೈತನ್ಯಳ ಮೃತದೇಹವನ್ನು ಹೈದರಾಬಾದ್‌ಗೆ ತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ್ಕಾಗಿ ಪತ್ರ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News